ನನ್ನ ಬ್ಯಾಚ್ ಮೇಟ್. ಹಾಗಾಗಿ ಅವರ ಭೇಟಿಯಲ್ಲಿ ವಿಶೇಷವೇನಿದೆ? ಎಂದು ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಚಿವ ರೇವಣ್ಣಗೆ ತಿರುಗೇಟು ನೀಡಿದ್ದಾರೆ
ಈ ಹಿಂದೆ ಜಿಲ್ಲೆಯ ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೆಲಸ ಮಾಡುತ್ತಿದ್ದಾರೆ ಅಂತಾ ರೇವಣ್ಣ ಈ ಹಿಂದೆ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ, ನಾನು ಸ್ವತಂತ್ರವಾಗಿಯೇ ಕೆಲಸ ಮಾಡುತ್ತಿದ್ದೇನೆ. ಯಾರಿಂದಲೂ ಸಲಹೆ ಪಡೆಯುವ ಅವಶ್ಯಕತೆ ನನಗಿಲ್ಲ. ರೋಹಿಣಿಯವರು ನನ್ನ ಬ್ಯಾಚ್ ಮೇಟ್. ಹಾಗಾಗಿ ಅವರ ಭೇಟಿಯಲ್ಲಿ ವಿಶೇಷವೇನಿದೆ. ಹಾಗಂತ ರೋಹಿಣಿ ಎರಡು ದಿನ ತಮ್ಮೊಂದಿಗಿದ್ದರು ಎಂಬ ಆರೋಪವನ್ನ ಪ್ರಿಯಾಂಕಾ ತಳ್ಳಿಹಾಕಿದ್ದಾರೆ.
Discussion about this post