ಸಿದ್ದರಾಮಯ್ಯರ ವಿರುದ್ದ ದೇವೇಗೌಡರು ಆಡಿರೋ ಮಾತು ನೆನೆಸಿಕೊಂಡ್ರೆ ಅವರನ್ನ ಸಿದ್ದರಾಮಯ್ಯ ಮಾತನಾಡಿಸಲ್ಲ. ಇಂಥ ನೀಚನನ್ನ ಬೆಳೆಸಿದೆ ಎಂದು ಹೇಳಿದ್ದು ಅವರಿಗೆ ಮರೆತು ಹೋಯಿತಾ? ಸಿದ್ದರಾಮಯ್ಯ ಸ್ವಾಭಿಮಾನಿಗಳಪ್ಪ.ಇದನ್ನೆಲ್ಲಾ ಹೇಗೆ ಸಹಿಸಿಕೊಂಡು ಹೇಗೆ ಸುಮ್ಮನಿದ್ದಾರೋ ಗೊತ್ತಿಲ್ಲ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು ನಾನೂ ಕೂಡಾ ಸಿದ್ದರಾಮಯ್ಯ ಅವರ ಫಾಲೋಯರ್. ಆದರೆ ಈಗ ಅವರು ರಾಹುಲ್ ಗಾಂಧಿಗೆ ಕಟ್ಟು ಬಿದ್ದಿದ್ದಾರೆ. ನಾನು ಕಾರ್ಯಕರ್ತರಿಗೆ ಕಟ್ಟು ಬಿದ್ದಿದ್ದೀನಿ. ಅವರು ಏನಾದ್ರು ಹೇಳಬಹುದು. ಸಿದ್ದರಾಮಯ್ಯ ಅವರೇ ನನ್ನ ಗುರು. ಏನೇ ಅಂದ್ರೂ ಅವರು ಮನೆ ದೇವರು ಎಂದಿದ್ದಾರೆ.
ಇಂಥ ನೀಚ ಸಿಎಂ ಬೆಳೆಸಿದ್ದೇ ಅಪರಾಧ: ಎಚ್ಡಿಡಿ
ನನ್ನ ಮೇಲೆ ಪ್ರೀತಿಯಿದ್ದರೆ ಎ ಮಂಜು ಸೋಲಿಸಿ,’ ಎಂದು ಕರೆ ನೀಡಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಂಜು ಅವರು, ಸಿದ್ದರಾಮಯ್ಯ ಮೇಲೆ ಪ್ರೀತಿ ಇದ್ರೆ ಜನ ನನ್ನನ್ನೇ ಗೆಲ್ಲಿಸುತ್ತಾರೆ. ಯಾಕೆಂದ್ರೆ ಸಿದ್ದರಾಮಯ್ಯರನ್ನ ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದನ್ನ ಜನ ಮರೆತಿದ್ದಾರಾ? ಈಗ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಜೊತೆಯಲ್ಲಿ ಬರುತ್ತಿದ್ದಾರೆ. ಇದಾದ ತಕ್ಷಣ ಮೊದಲು ದೂರ ಮಾಡೋದೇ ಸಿದ್ದರಾಮಯ್ಯರನ್ನ. ಚುನಾವಣೆ ಮುಗಿದ ಬಳಿಕ ಗೌಡರು ಮತ್ತೆ ಸಿದ್ದರಾಮಯ್ಯರನ್ನ ದೂರ ಮಾಡ್ತಾರೆ.’ ಎಂದರು.
Discussion about this post