ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸರು ಕರ್ತವ್ಯಕ್ಕಿಂತ ಬೇರೆ ಕೆಲಸಗಳಲ್ಲೇ ( hariram shankar ips ) ತೊಡಗಿಕೊಂಡಿರುತ್ತಾರೆ
ಹಾಸನ : ಮಂಗಳೂರಿನಲ್ಲಿ ಡಿಸಿಪಿಯಾಗಿದ್ದ ಹರಿರಾಮ್ ಶಂಕರ್ ( hariram shankar ips ) ಇದೀಗ ಪಕ್ಕದ ಹಾಸನ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಂಗಳೂರು ನಗರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಹರಿರಾಮ್ ಶಂಕರ್ ಹಾಸನದಲ್ಲೂ ಕ್ರಾಂತಿ ಮಾಡುವ ನಿರೀಕ್ಷೆಗಳಿತ್ತು.
ಇದರ ಮೊದಲ ಭಾಗವಾಗಿ ಒಂದೇ ದಿನ 172 ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ. ಇವರೆಲ್ಲರೂ ಒಂದೇ ಠಾಣೆಯಲ್ಲಿ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಹಲವಾರು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಜಾಂಡ ಊರಿದ್ದ ಇವರು ಅಕ್ರಮಗಳಿಗೆ ಸಾಥ್ ಕೊಡುತ್ತಿದ್ದಾರೆ ಅನ್ನುವ ಆರೋಪ ಕೂಡಾ ಕೇಳಿ ಬಂದಿತ್ತು. ದಿಶಾ ಸಭೆಯಲ್ಲೂ ಈ ಬಗ್ಗೆ ದೂರುಗಳು ಬಂದಿತ್ತು.
ಇದನ್ನೂ ಓದಿ : bengaluru murder crime : ಅಪ್ರಾಪ್ತೆಗೆ ಮೆಸೇಜ್ ಮಾಡಿ ಕಾರಣಕ್ಕೆ ಕೊಲೆಯಾದ 17ರ ಬಾಲಕ
ಇದರ ಬೆನ್ನಲ್ಲೇ ಆಡಳಿತ ವಿಭಾಗದಲ್ಲಿ ಹಿಡಿತ ಮತ್ತು ಸುಧಾರಮೆ ನಿಟ್ಟಿನಲ್ಲಿ ಈ ವರ್ಗಾವಣೆ ಮಾಡಲಾಗಿದೆ. ಒಟ್ಟಿನಲ್ಲಿ ಹೊಸದಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿ ( hariram shankar ips ) ಹಾಸನದಲ್ಲೊಂದು ಮೈಲಿಗಲ್ಲು ಸ್ಥಾಪಿಸೋದು ಖಚಿತವಾಗಿದೆ.
ಕೆಂಪೇಗೌಡ ಬಡಾವಣೆಯಲ್ಲಿ ಚಿರತೆ ಹೆಜ್ಜೆ ಗುರುತು
ಬೆಂಗಳೂರು ವಿಸ್ತಾರಗೊಳ್ಳುತ್ತಿದೆ. ಕಾಡುಪ್ರಾಣಿಗಳ ವಾಸ ಸ್ಥಾನವನ್ನು ಈಗಾಗಲೇ ನಾಗರಿಕರ ವಾಸಕ್ಕೆ ಕಬಳಿಸಲಾಗಿದೆ
ಬೆಂಗಳೂರು : ನಾಡಪ್ರಭು ಕೆಂಪೇಗೌಡ ಬಡಾವಣೆಯ ಸೂಳಿಕೆರೆ ಪಾಳ್ಯದಲ್ಲಿ ಚಿರತೆಯ ಹೆಜ್ಜೆ ಗುರುತಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಡಾವಣೆಯಲ್ಲಿ ಕುರುಚಲು ಗಿಡಗಳು ದಟ್ಟವಾಗಿ ಬೆಳೆದಿದೆ, ಮಾತ್ರವಲ್ಲದೆ ಕಾಡಿಗೂ ಹತ್ತಿರವಿದೆ. ಮಾತ್ರವಲ್ಲದೆ ಈ ಹಿಂದೆ ಕುರಿ ಮತ್ತು ನಾಯಿಗಳನ್ನು ಹೊತ್ತೊಯ್ದ ಘಟನೆಗಳು ನಡೆದಿದೆ ಎಂದು ಸೂಳಿಕೆರೆ ಪಾಳ್ಯದ ನಿವಾಸಿಗಳು ಹೇಳಿದ್ದಾರೆ.
ಆದರೆ ಈ ಹೆಜ್ಜೆ ಗುರುತಿನ ಬಗ್ಗೆ ಸೂಳಿಕೆರೆ ಪಾಳ್ಯದ ನಿವಾಸಿಗಳ ಹೇಳಿಕೆಯನ್ನು ಅಲ್ಲಗಳೆದಿರುವ ಅರಣ್ಯಾಧಿಕಾರಿಗಳು ಇದು ನಾಯಿ ಅಥವಾ ದೊಡ್ಡ ಬೆಕ್ಕಿನ ಹೆಜ್ಜೆ ಗುರುತಾಗಿರಬಹುದು. ಸೂಲಿಕೆರೆ ಮೀಸಲು ಅರಣ್ಯ ಪ್ರದೇಶ NPKL ಸಮೀಪವಿದ್ದು, ಅಲ್ಲಿಂದ ಚಿರತೆ ಬಂದು ಹೋಗಿರಬಹುದು ಹೀಗಾಗಿ ಸ್ಥಳೀಯರು ಆತಂಕ ಪಡುವ ಅಗತ್ಯವಿಲ್ಲ ಅಂದಿದ್ದಾರೆ.
ಹಾಗೇ ನೋಡಿದರೆ ಈ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವು ಹೊಸದೇನಲ್ಲ. ಎರಡು ವರ್ಷಗಳ ಹಿಂದೆ ಭೀಮನಕುಪ್ಪೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕಳೆದ ವರ್ಷ ಬೆಟ್ಟಪಾಳ್ಯ, ಕೊಮ್ಮಘಟ್ಟ ಸಮೀಪ ಚಿರತೆ ಓಡಾಡುತ್ತಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳಿದ್ದಾರೆ.
Discussion about this post