ಅರಣ್ಯಕ್ಕೆ ಹುಲಿ ತೆರಳಿರುವ ಹೆಜ್ಜೆ ಗುರುತು ಪತ್ತೆ
ಕೊಡಗು ಜಿಲ್ಲೆಯ ಶ್ರೀಮಂಗಲ ಹೋಬಳಿಯ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿಯನ್ನು ಸೆರೆ ಹಿಡಿಯಲು ನಡೆಸಲಾಗುತ್ತಿದ್ದ ಕಾರ್ಯಾಚರಣೆಯನ್ನು ಮಂಗಳವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿದೆ. ಗ್ರಾಮ ಸಮೀಪದ ಅರಣ್ಯಕ್ಕೆ ಹುಲಿ ತೆರಳಿರುವ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ೨ ತಿಂಗಳಿನಿಂದ ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ೧೬ ಹಸುಗಳನ್ನು ಹುಲಿ ದಾಳಿ ಮಾಡಿ ಕೊಂದಿತ್ತು. ಕಾರ್ಯಾಚರಣೆ ಮುಗಿದ ಹಿನ್ನೆಲೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಆಗಮಿಸಿದ್ದ ಶ್ರೀರಾಮ ಮತ್ತು ಅಜಯ ಸಾಕಾನೆಗಳು ತಮ್ಮ ಶಿಬಿರಕ್ಕೆ ಮರಳಿವೆ.