ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ( ganja arrest) ದಂಧೆ ಎಗ್ಗಿಲ್ಲದೆ ಸಾಗಿದೆ ಅನ್ನುವ ಆರೋಪವಿದೆ. ಈ ಬಗ್ಗೆಯೂ ಪೊಲೀಸರು ಗಮನ ಹರಿಸಬೇಕಾಗಿದೆ.
ಬೆಂಗಳೂರು : ಕೊಣಾಜೆ ಪೊಲೀಸರು ನಡೆಸಿದ ಭಾರಿ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಖದೀಮರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ 3 ಲಕ್ಷಕ್ಕೂ ಅಧಿಕ ಮೊತ್ತದ 32 ಕೆಜಿ ಗಾಂಜಾ ( ganja arrest) ವಶಪಡಿಸಿಕೊಳ್ಳಲಾಗಿದೆ.
Read More : Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ
ಆರೋಪಿಗಳು ಬೆಂಗಳೂರಿನಲ್ಲಿ ಗಾಂಜಾವನ್ನು ( ganja arrest) ತಮ್ಮ ಅಲ್ಟೋ ಕಾರಿಗೆ ತುಂಬಿಸಿ ಉಪ್ಪಿನಂಗಡಿ, ಮೆಲ್ಕಾರ್, ಮುಡಿಪು ಮಾರ್ಗವಾಗಿ ಕೇರಳಕ್ಕೆ ಸಾಗಿಸಲು ಯೋಜಿಸಿದ್ದರು. ಅದರಂತೆ ಅರ್ಧ ದಾರಿ ಸಾಗಿ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕೊಣಾಜೆ ಪೊಲೀಸರು ಚೇಳೂರು ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ.
ಬಂಧಿತರನ್ನು ಕಾಸರಗೋಡು ಮುಟ್ಟತೋಡಿಯ ಮಹಮ್ಮದ್ ಆಶ್ರಫ್ (42), ಮಂಜೇಶ್ವರ ಮಂಗಲ್ಪಾಡಿಯ ಮಹಮ್ಮದ್ ಬಾತೀಶ್ (37), ಮಲಪುರಂ ಪೊನ್ನಾಣಿಯ ಜಂಶೀರ್ (27), ಮತ್ತು ಕಾಸರಗೋಡು ಬಂದ್ಯೋಡಿನ ಮಹಮ್ಮದ್ ನೌಫಾಲ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, 4 ಮೊಬೈಲ್ ಫೋನ್ ಮತ್ತು ಎರಡು ಟ್ರಾವೆಲ್ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ., ಕೊಣಾಜೆ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.
Discussion about this post