ಬೆಂಗಳೂರು : ಗಣೇಶೋತ್ಸವ ವಿಚಾರದಲ್ಲಿ ಸರ್ಕಾರ ಎಡವಟ್ಟುಗಳು ಮತ್ತೆ ಮುಂದುವರಿದಿದೆ. ಗಣೇಶೋತ್ಸವ ಮಾರ್ಗಸೂಚಿ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ ನಡೆದುಕೊಂಡ ರೀತಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಗಳಿದೆ.
ಈ ನಡುವೆ ಹಿಂದೂ ಸಂಘಟನೆಗಳಿಗೆ ಮಣಿದಿರುವ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಿಸುವ ಕುರಿತಂತೆ ತಿದ್ದುಪಡಿ ಮಾಡಿದ್ದು, ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿ ಪ್ರಕಾರ ರಸ್ತೆ, ಮೈದಾನಗಳಲ್ಲಿ ಗಣೇಶನನ್ನು ಕೂರಿಸಬಹುದಾಗಿದೆ.
ವಾರ್ಡ್ ಗೆ ಒಂದೇ ಗಣೇಶನ ವಿಗ್ರಹ ಅನ್ನುವ ನಿಯಮವನ್ನು ತೆಗೆದು ಹಾಕಲಾಗಿದ್ದು, ಗಣೇಶನನ್ನು ಕೂರಿಸಲು ಪೊಲೀಸರ ಅನುಮತಿ ಕಡ್ಡಾಯವಾಗಿದೆ. ಇನ್ನು 4 ಅಡಿಗಿಂತ ಎತ್ತರದ ಗಣೇಶನನ್ನು ಕೂರಿಸಬಹುದಾಗಿದ್ದು, 5 ದಿನಗಳ ಕಾಲ ಗಣೇಶೋತ್ಸವ ಆಚರಿಸಬಹುದು. ಜೊತೆಗೆ 10 ದಿನಗಳ ಕಾಲ ಗಣೇಶನನ್ನು ಕೂರಿಸಲು ಅವಕಾಶ ನೀಡಲಾಗಿದೆ.
ನಾಳೆಯೇ ಗಣೇಶನ ಹಬ್ಬ ಶುರು ಅಂದ ಮೇಲೆ ಇಂದು ಹೀಗೆಲ್ಲಾ ಗೊಂದಲ ಸೃಷ್ಟಿಸುವ ಬದಲು, ಮೊದಲೇ ಗಣೇಶೋತ್ಸವ ಸಮಿತಿಯ ಸದಸ್ಯರನ್ನು ಕರೆದು ಮಾತನಾಡಿಸಿದ್ರೆ ಈ ಸಮಸ್ಯೆ ಬರುತ್ತಿರಲಿಲ್ಲ. ಈಗ ಬೆಳಗಾವಿ ಮತ್ತು ಬೆಂಗಳೂರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ನೀಡಿದೆ. ಹಾಗಾದ್ರೆ ಮಂಗಳೂರು ಸೇರಿದಂತೆ ಉಳಿದ ಭಾಗಗಳಿಗೆ ಅನ್ಯಾಯ ಮಾಡಿದಂತಾಗುವುದಿಲ್ವ.
Discussion about this post