ಬೆಂಗಳೂರು : ನಮ್ಮ ರಾಜಕಾರಣಿಗಳ ನಾಲಗೆಯೊಂದು ಹಿಡಿತದಲ್ಲಿರುತ್ತಿದ್ರೆ ದೇಶ ಖಂಡಿತಾ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಎಲ್ಲಿ ಯಾವಾಗ ಹೇಗೆ ಮಾತನಾಡಬೇಕು ಅನ್ನುವ ಅರಿವಿಲ್ಲದೆ ಟಿವಿ ಕ್ಯಾಮಾರ ಕಂಡ ತಕ್ಷಣ ಭಾಷಣ ಬಿಗಿಯಲು ಹೋಗಿಯೇ ಹೀಗಾಗುತ್ತಿದೆ. ಅದರಲ್ಲೂ ಗಾಜಿನ ಮನೆಯಲ್ಲೇ ಕೂತವರು, ಎಲ್ಲರ ಮನೆಯ ದೋಸೆಯೂ ತೂತು ಎಂದು ಗೊತ್ತಿದವರು ನೀಡುವ ಹೇಳಿಕೆಗಳು ಅವರಿಗೆ ತಿರುಗುಬಾಣವಾಗಿ ಬಿಡುತ್ತದೆ. ಇದೇ ಪಾಡು ಸಿದ್ದರಾಮಯ್ಯ ಅವರದ್ದು.
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅಪ್ಪನ ಗುಣವೇ ಮಗನಿಗೂ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗಾಂಧೀಜಿಯ ಮಗ ಕುಡುಕನಾಗಲಿಲ್ಲವ್ವ?, ಅಪ್ಪನನ್ನು ನೋಡಿ ಮಗನ ಗುಣವನ್ನು ಅಳೆಯಲು ಸಾಧ್ಯವಿಲ್ಲ. ತಂದೆಯ ಗುಣ ಕೆಲವು ಮಕ್ಕಳಿಗೆ ಬರುವುದಿಲ್ಲ ಅಂದಿದ್ದಾರೆ.
ಸಿದ್ದರಾಮಯ್ಯ ಹೇಳಿರುವ ಮಾತಿನಲ್ಲಿ ನಿಜಾಂಶವಿದೆ ಅನ್ನುವುದು ಸತ್ಯ. ಆದರೆ ಅವರು ನೀಡಿದ ಹೇಳಿಕೆ ಇದೀಗ ಅವರ ಬುಡಕ್ಕೆ ಬಿಸಿ ಮುಟ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ “ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲಾ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ ಸಿದ್ದರಾಮಯ್ಯ? ನಿಮ್ಮ ಪುತ್ರ, ಡಾ. ಯತೀಂದ್ರ ಅವರಿಗೆ ನಿಮ್ಮ ಗುಣ ಎಷ್ಟು ಬಂದಿದೆ? ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥೈಸಿಕೊಳ್ಳಿ ಮಜವಾದಿ ಸಿದ್ದರಾಮಯ್ಯ ಅಂದಿದೆ.
ಇನ್ನು ಕೆಲವರು ಸಿದ್ದರಾಮಯ್ಯನವರೇ ನೀವು ಯಾವ ಗಾಂಧಿ ಬಗ್ಗೆ ಹೇಳಿದ್ದು? ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿ ಪುತ್ರನ ಬಗ್ಗೆಯೋ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ದೊಣ್ಣೆ ಪೆಟ್ಟು ತಿಂದ ಪರಿಸ್ಥಿತಿ ಮಾಜಿ ಮುಖ್ಯಮಂತ್ರಿಯವರದ್ದು.
Discussion about this post