ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್ಪೆಕ್ಟರ್ ಸುದ್ದಿಯನ್ನು ಓದಿದ ನಿಮಗೆ ಅದೇ ಇಲಾಖೆ ಮತ್ತೊಂದು ಮುಖದ ದರ್ಶನ ಈ Gadag probationary psi ಸುದ್ದಿಯಲ್ಲಾಗುತ್ತದೆ.
ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದ ಹೊರವಲಯದ ಡಾಬಾ ಒಂದಕ್ಕೆ ತನ್ನ ಗ್ಯಾಂಗ್ ಜೊತೆ ನುಗ್ಗಿದ ಪ್ರೊಬೆಷನರಿ ಪಿಎಸ್ಐ ( gadag probationary psi ) ಗಲಾಟೆ ಮಾಡಿ ಡಾಬಾ ಪುಡಿಗಟ್ಟಿದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಐವರು ಗೆಳೆಯರೊಂದಿಗೆ ಸೇರಿ ರಾಡಿ ರಂಪಾಟ ಮಾಡಿದ್ದಾರೆ. ಅಂದ ಹಾಗೇ ಗಲಾಟೆ ಮಾಡಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್ಐ ಅರವಿಂದ ಅಂಗಡಿ ಮತ್ತು ಸ್ನೇಹಿತರು
ಶ್ರೀಶೈಲ ಕಳ್ಳಿಮಠ ಅನ್ನುವವರ ಲಕ್ಕಿ ಡಾಬಾ ಗೆ ಸೋಮವಾರ ರಾತ್ರಿ ( ಜುಲೈ 4 ) ನುಗ್ಗಿದ ಅರವಿಂದ ಗ್ಯಾಂಗ್ ಕುಡಿದ ಮತ್ತಿನಲ್ಲಿ ಏಕಾಏಕಿ ಗಲಾಟೆ ಮಾಡಿದೆ. ಕಂಠ ಪೂರ್ತಿ ಕುಡಿದಿದ್ದ ಗುಂಪು ಡಾಬಾದ ಫ್ಯಾಮಿಲಿ ರೂಮ್ನಲ್ಲಿ ಕೂತು ಕುಡಿಯೋದಕ್ಕೆ ಅವಕಾಶ ಕೇಳಿದ್ರಂತೆ. ಫ್ಯಾಮಿಲಿ ರೂಮ್ನಲ್ಲಿ ಅವಕಾಶ ಇಲ್ಲ. ಹೊರಗಡೆ ಪ್ರತ್ಯೇಕವಾಗಿ ಅವಕಾಶ ಮಾಡಿ ಕೊಡ್ತೀನಿ ಎಂದು ಶ್ರೀಶೈಲ ಕಳ್ಳಿಮಠ ಹೇಳಿದ್ರೆ ಅದನ್ನು ಕೇಳುವ ಸ್ಥಿತಿಯಲ್ಲಿ ಅರವಿಂದ ಅಂಗಡಿ ಇರಲಿಲ್ಲ.
ಇದನ್ನೂ ಓದಿ : Ramya Bangkok : ರಾಜಕೀಯದಿಂದ ದೂರ ಸರಿದ ರಮ್ಯಾ ಬ್ಯಾಂಕಾಕ್ ನತ್ತ ಪಯಣ
ಈ ವೇಳೆ ಪಾರ್ಸೆಲ್ ಕೊಡಿ ಹೊರಗಡೆ ಹೋಗ್ತೀವಿ ಅಂತಾ ಗುಂಪಿನಲ್ಲಿದ್ದವರು ಹೇಳಿದ್ದಾರೆ. ಪಾರ್ಸೆಲ್ ಕೊಡುವ ಸಂದರ್ಭದಲ್ಲಿ ಅರವಿಂದ ಅಂಗಡಿ ಗೆಳೆಯ ಹನಮಂತ ಮತ್ತೆ ಕಿರಿಕ್ ತೆಗೆದು ಡಾಬಾ ಮಾಲೀಕ ಶ್ರೀಶೈಲ ಅವರ ತಲೆಗೆ ಸೋಡಾ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ.
ಇದಾದ ಬಳಿಕ ಮಾತಿಗೆ ಮಾತು ಬೆಳೆದು ರೌಡಿಗಳ ಗುಂಪು ಡಾಬಾ ಧ್ವಂಸಗೊಳಿಸಿದೆ. ಡಾಬಾದಲ್ಲಿನ ಫ್ರಿಜ್ಡ್, ಕೌಂಟರ್ ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅಡುಗೆ ಮನೆಗೆ ನುಗ್ಗಿ ಸಿಲಿಂಡರ್ನಿಂದ ಬೆಂಕಿ ಹಚ್ಚಲು ಮುಂದಾಗಿದ್ದಾರಂತೆ. ಈ ಎಲ್ಲಾ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎಂದು ಗಾಯಗೊಂಡಿರುವ ಶ್ರೀಶೈಲ ಕಳ್ಳಿಮಠ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಡಾಬಾ ಮಾಲೀಕ ಶ್ರೀ ಶೈಲ ಅವರಿಗೆ ಕರೆ ಮಾಡಿದ್ದ ಪಿಎಸ್ಐ ಅರವಿಂದ ಅಂಗಡಿ, ಕಾಜು ಮಸಾಲಾ ಪಾರ್ಸೆಲ್ ಮಾಡು ಹೊರಗಡೆ ಇದ್ದೀನಿ ಅಂದಿದ್ದನಂತೆ. ಈ ವೇಳೆ ನಾನು ಹೊರಗಡೆ ಇದ್ದೀನಿ ಡಾಬಾಕ್ಕೆ ಹೋಗಿ ಪಾರ್ಸೆಲ್ ಸಿಗುತ್ತೆ ಅಂದಿದ್ದಾರೆ. ಇದೇ ಕೋಪ ಇಟ್ಟುಕೊಂಡು ಪಿಎಸ್ಐ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಅಂತಾ ಶ್ರೀಶೈಲ ಆರೋಪಿಸಿದ್ದಾರೆ.
ಇದರಲ್ಲಿ ಯಾವುದು ಸತ್ಯ, ಸುಳ್ಳು ಅನ್ನುವುದು ಪ್ರಾಮಾಣಿಕ ತನಿಖೆ ನಡೆದರೆ ಗೊತ್ತಾಗಲಿದೆ. ಆದರೆ ಅರವಿಂದ ಅಂಗಡಿ ವರ್ತನೆ ಗಮನಿಸಿದರೆ, ಈ ವ್ಯಕ್ತಿ ಶಿಸ್ತಿನ ಮಾರ್ಗದಿಂದ ಪೊಲೀಸ್ ಇಲಾಖೆ ಸೇರಿದಂತೆ ಕಾಣಿಸುತ್ತಿಲ್ಲ. ಆದ್ಯಾವುದೋ ಅಡ್ಡ ಮಾರ್ಗದಿಂದಲೇ ಬಂದಿರಬೇಕು.
ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲಾ ಕೆಟ್ಟವರಲ್ಲ : ಅನಾರೋಗ್ಯ ಪೀಡತನೊಬ್ಬನಿಗೆ ಸಹಾಯ ಹಸ್ತ ಚಾಚಿದ ಅನಿತಾ ಲಕ್ಷ್ಮಿ
ಬೆಂಗಳೂರು : ಪೊಲೀಸ್ ಇಲಾಖೆ ಹಿಂದಿನಂತಿಲ್ಲ. ಜನಸ್ನೇಹಿ ಪೊಲೀಸ್ ಠಾಣೆ ಅನ್ನುವುದು ನ್ಯೂಸ್ ಪೇಪರ್ ಗಳಲ್ಲಿ ಬರೆಯಲು ಮಾತ್ರ ಚೆಂದ. ಆದ್ಯಾವ ಪೊಲೀಸ್ ಠಾಣೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಗೌರವ ಸಿಗುತ್ತದೆ ಹೇಳಿ. ವಿಐಪಿಯೋ, ಖಾದಿಯೋ ಹೋದರೆ ಅವನಿಗೆ ರಾಜಾತಿಥ್ಯ. ಜನ ಸಾಮಾನ್ಯನೊಬ್ಬ ಹೋದ್ರೆ ಕೂರಲು ಚೆಯರ್ ಬಿಡಿ, ಕುಡಿಯಲು ನೀರು ಸಿಗೋದಿಲ್ಲ. ಆದರೆ ಇಂತಹ ಆತಂಕ ಮತ್ತು ಆರೋಪದ ನಡುವೆ ಭರವಸೆ ಅನ್ನುವಂತೆ ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಒಂದು ಹೆಸರು PSI Anita Lakshmi.
ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅನಿತಾಲಕ್ಷ್ಮೀ ಮಂಗಳವಾರ ಜುಲೈ 5ರ ಮಧ್ಯಾಹ್ನ ಗಸ್ತಿನಲ್ಲಿದ್ದರು. ಈ ವೇಳೆ ಚಂದ್ರಾಲೇಔಟ್ನ ಗ್ಯಾರೇಜ್ ಬಳಿ 25 ವರ್ಷದ ಯುವಕನೊಬ್ಬ ಫಿಡ್ಸ್ ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಅಲ್ಲೇ ಗಸ್ತಿನಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿದ್ದಾರೆ. ಕುಸಿದು ಬಿದ್ದಿದ್ದ ಇಮ್ರಾನ್ ಗೆ ಗ್ಯಾರೇಜ್ನಲ್ಲಿ ಇದ್ದ ಕಬ್ಬಿಣವನ್ನು ತಂದು ಸ್ಥಳೀಯರು ಆತನ ಕೈಗಿಟ್ಟಿದ್ದಾರೆ.
ಈ ವೇಳೆ ಯುವಕನ ಸಂಕಷ್ಟಕ್ಕೆ ಸ್ಪಂದಿಸಿದ PSI Anita Lakshmi ತಕ್ಷಣ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಸಮುಯದಲ್ಲಿ ಚಿಕಿತ್ಸೆ ಸಿಕ್ಕ ಕಾರಣ ಇಮ್ರಾನ್ ಚೇತರಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಸಬ್ ಇನ್ಸ್ಪೆಕ್ಟರ್ ಅನಿತಾಲಕ್ಷ್ಮೀ ಅವರೇ ಈತನ ಚಿಕಿತ್ಸಾ ವೆಚ್ಚವನ್ನೂ ಭರಿಸಿದ್ದಾರೆ. ಈ ನಡುವೆ ಈತ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದಾನೆ ಅನ್ನುವುದನ್ನು ಅರಿತ ಅನಿತಾಲಕ್ಷ್ಮಿ ಕುಡಿಯುವುದನ್ನು ಬಿಡುವಂತೆ ಮನವೊಲಿಸಿದ್ದಾರೆ. ಪೊಲೀಸ್ ಅಧಿಕಾರಿ ಅನ್ನುವುದನ್ನು ಪಕ್ಕಕ್ಕಿಟ್ಟು ಸಹೋದರಿ ಅನ್ನುವಂತೆ ಗದರಿದ್ದಾರೆ ಕೂಡಾ.
ಒಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲೂ ಮಾನವೀಯತೆಯ ಮುಖಗಳು ಇವೆ ಅನ್ನುವುದನ್ನು ಅನಿತಾ ಲಕ್ಷ್ಮಿ ತೋರಿಸಿಕೊಟ್ಟಿದ್ದಾರೆ. ಎಲ್ಲಾದ್ರೂ ಈ ಮೇಡಂ ಸಿಕ್ರೆ ಅವರ ಮಾತೃ ಹೃದಯದ ಈ ಸೇವೆಗೊಂದು ಸೆಲ್ಯೂಟ್ ಹೊಡೆಯುವುದನ್ನು ಮರೆಯಬೇಡಿ. PSI Anita Lakshmi ಕೆಲಸ ಇತರ ಅಧಿಕಾರಿಗಳ ಕಣ್ಣು ತೆರೆಸಲಿ ಅನ್ನುವುದೇ ನಮ್ಮ ಆಶಯ.
Discussion about this post