ಕ್ಯೂಬಾ Cuba ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ದರ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ
ಕಮ್ಯುನಿಸ್ಟ್ ರಾಷ್ಟ್ರವಾಗಿರುವ ಕ್ಯೂಬಾ Cuba ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದೆ. ಪರಿಸ್ಥಿತಿ ಗಮನಿಸಿದ್ರೆ ಕ್ಯೂಬಾ ದಿವಾಳಿಯಂಚಿಗೆ ಬಂದು ತಲುಪಿದರೂ ಅಚ್ಚರಿ ಇಲ್ಲ.
ಇದೀಗ ಕ್ಯೂಬಾದಲ್ಲಿ ಇಂಧನ ದರ ಗಗನಮುಖಿಯಾಗಿದ್ದು, ಏಕಾಏಕಿ 5 ಪಟ್ಟು ಇಂಧನ ದರವನ್ನು ಏರಿಸಲಾಗಿದೆ. ಈ ಮೂಲಕ ನಾಗರಿಕರಿಗೆ ಬೆಲೆ ಏರಿಕೆ ಬರೆ ಹಾಕಲಾಗಿದೆ.
ಇದನ್ನು ಓದಿ : ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ
ಪೆಟ್ರೋಲ್ ಬೆಲೆಯನ್ನು ಸರ್ಕಾರ ಶೇ500ರಷ್ಟು ಏರಿಸಿದ್ದು, ಈ ಮೂಲಕ ಹಳಿ ತಪ್ಪಿರುವ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಏರಿಕೆಯಾಗಿರುವ ಪೆಟ್ರೋಲ್ ದರ ಫೆಬ್ರವರಿ 1 ರಿಂದ ಜಾರಿಗೆ ಬರಲಿದ್ದು, ಈಗ ಕ್ಯೂಬಾದಲ್ಲಿ 1 ಲೀಟರ್ ಪೆಟ್ರೋಲ್ ದರ 25 ಪೆಸಾಸ್ ನಷ್ಟಿದೆ. ಅಂದ್ರೆ 86 ರೂಪಾಯಿ. ಫೆಬ್ರವರಿ 1 ರಿಂದ ಈ ದರ 132 ಪೆಸಾಸ್ ಗೆ ಏರಿಕೆಯಾಗಲಿದೆ. ಅಂದ್ರೆ 1 ಲೀಟರ್ ಪೆಟ್ರೋಲ್ ಗೆ 456 ರೂಪಾಯಿಯನ್ನು ಕೊಡಬೇಕಾಗುತ್ತದೆ.
ಕೇವಲ ಇಂಧನ ಮಾತ್ರವಲ್ಲ ವಿದ್ಯುತ್ ದರ ಏರಿಕೆಯೂ ನಿರ್ಧರಿಸಲಾಗಿದ್ದು, ಶೇ25ರಷ್ಟು ವಿದ್ಯುತ್ ದರ ಏರಿಸುವುದಾಗಿ Finance minister Vladimir Regueiro ಘೋಷಿಸಿದ್ದಾರೆ. ಜೊತೆಗೆ ಅಡುಗೆ ಅನಿಲ ದರವೂ ಏರಿಕೆಯಾಗಲಿದೆ.
ಇದನ್ನು ಓದಿ : ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ
ಈ ಹಿಂದೆ ಇಡೀ ವಿಶ್ವದಲ್ಲಿ ಅತ್ಯಂತ ಕಡಿಮೆ ದರ ಪೆಟ್ರೋಲ್ ಸಿಗೋ ದೇಶ ಅಂದ್ರೆ ಅದು ಕ್ಯೂಬಾ ಎಂದು ಹೇಳಲಾಗಿತ್ತು. ಆದರೆ ಈ ಹೇಳಿಕೆಯನ್ನು ಖಂಡಿಸಿದ್ದ Economics professor Omar Everleny Pérez ಜಗತ್ತಿನ ಮಾನದಂಡವನ್ನು ಗಮನಿಸಿದಾಗ ಕ್ಯೂಬಾದಲ್ಲಿ ಪೆಟ್ರೋಲ್ ಅಗ್ಗ ಇರಬಹುದು. ಆದರೆ ಕ್ಯೂಬಾ ನಾಗರಿಕರ ತಿಂಗಳ ಸಂಬಳವನ್ನು ಹೋಲಿಕೆ ಮಾಡಿದ್ರೆ ಕ್ಯೂಬಾದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ ಅಂದಿದ್ದರು.
Discussion about this post