ಮಂಗಳೂರು : ದೇಶದಲ್ಲಿ ಇದೀಗ ದರ ಏರಿಕೆಯದ್ದೇ ಸುದ್ದಿ. ಒಂದು ಕಡೆ ಪೆಟ್ರೋಲ್ ದರ ಏರಿಕೆ, ಮತ್ತೊಂದು ಗ್ಯಾಸ್ ದರ ಏರಿಕೆ, ಬಂಗಾರದ ದರ ಏರಿಕೆ, ತರಕಾರಿ ದರ ಏರಿಕೆ. ಕೋಳಿ ಮಾಂಸದ ಎಲ್ಲಾ ದರ ಏರಿಕೆ, ಹೀಗೆ ಎಲ್ಲಾ ದರ ಏರಿಕೆಯಾದ ಮೇಲೆ ಮೀನಿನ ದರ ಏರಿಕೆಯಾಗದಿದ್ರೆ ಹೇಗೆ.
ಹೌದು ಮಂಗಳೂರಿನಲ್ಲಿ ಮೀನು ದರವೂ ಗಗನಮುಖಿಯಾಗಿದ್ದು, 1 ಕೆಜಿ ಜಲ್ ಗೆ 700 ರೂಪಾಯಿಗೆ ಏರಿದೆ. ಹಿಂದೆ 1 ಕೆಜಿ ಅಂಜಲ್ ಗೆ 400 ಕೊಟ್ರೆ ಸಾಕಿತ್ತು.
ಇನ್ನು ಕಪ್ಪು ಮಾಂಜಿ 300 ರಿಂದ 700 ರೂಪಾಯಿಗೆ ಜಿಗಿದಿದೆ. ಬಿಳಿ ಮಾಂಜಿ ಸಾವಿರ ರೂಪಾಯಿಯಿಂದ 1250ಕ್ಕೆ ಏರಿದೆ. 100 ರೂಪಾಯಿಯ ಬೊಲ್ಲೆಂಜಿರ್ 250ರೂಪಾಯಿಗೆ ಏರಿದೆ. ಬಂಗುಡೆ 120 ರೂಪಾಯಿ ಇದದ್ದು 300ಕ್ಕೆ ಏರಿದೆ. ಇನ್ನು 80 ರೂಪಾಯಿಗೆ ಒಂದು ಕೆಜಿ ಭೂತಾಯಿ ತೆಗೆದುಕೊಂಡು ಹೋಗುತ್ತಿದ್ದವರು 160 ಕೊಡುವಂತಾಗಿದೆ.
ಸಮುದ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗದಿರುವ ಕಾರಣ ದೋಣಿಗಳು ಮೀನುಗಾರಿಕೆಗೆ ತೆರಳುತ್ತಿಲ್ಲ. ಹೀಗಾಗಿ ದರ ಏರಿಕೆಯಾಗುತ್ತಿದೆ ಎನ್ನಲಾಗಿದೆ.. ಮತ್ತೊಂದು ಕಡೆ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ಸಿಗದಿರುವ ಕಾರಣ ಬೋಟ್ ಮಾಲೀಕರಿಗೆ ಉದ್ಯಮ ನಡೆಸೋದು ಕಷ್ಟವಾಗಿದೆ. ಹೀಗಾಗಿ ಅವರು ಬಂದರ್ ನಲ್ಲಿ ಲಂಗರು ಹಾಕಿ ಕೂತಿದ್ದಾರೆ.
ಇನ್ನು ದರ ಏರಿಕೆಯ ಕಾರಣದಿಂದ ಹಲವು ಹೋಟೆಲ್ ಗಳಲ್ಲಿ ಹಲವು ಮೀನಿನ ಐಟಂ ಅನ್ನು ಮೆನುವಿನಿಂದ ಕೈ ಬಿಡಲಾಗಿದೆ. ಮೀನು ದರ ದುಬಾರಿಯಾಗಿರುವ ಕಾರಣ ಗ್ರಾಹಕರು ಮೀನಿನ ಐಟಂ ಖರೀದಿಸಲು ಒಲವು ತೋರಿಸುತ್ತಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Discussion about this post