ದೇಶದ ಚುನಾವಣಾ ಸುಧಾರಣೆ ಕುರಿತಂತೆ ಸುದೀರ್ಘವಾಗಿ ಮಾತನಾಡಿದ ರಮೇಶ್ ಕುಮಾರ್ ಮುಂದುವರಿದು, ಚುನಾವಣೆಯ ಸುಧಾರಣೆ ಮಾಡುವ ವೇಳೆ ರಾಜಕೀಯ ಪಕ್ಷಗಳ ನಡಾವಳಿಗಳ ಬಗ್ಗೆ ಮಾತನಾಡಬೇಕು. ಅವು ಸಾಂಸ್ಥಿಕ ಸ್ವರೂಪವನ್ನು ಕಳೆದುಕೊಂಡು ವೈಯುಕ್ತಿಕ ಒಡೆತನಕ್ಕೆ, ಕೌಟುಂಬಿಕ ಒಡೆತನಕ್ಕೆ ಬಿದ್ದು ಎಲ್ಲೋ ಒಂದು ಕಡೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಬಹಳ ದೊಡ್ಡ ಅಪಾಯವನ್ನು ಒಡ್ಡುತ್ತಿದೆ ಎಂದರು.
ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಎಲ್ಲವನ್ನೂ ಕಳೆದುಕೊಂಡು ನಮಗೆ ತಂದುಕೊಟ್ಟಿದ್ದಾರೆ ನಾವು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಎಲ್ಲೋ ಒಂದು ಕಡೆ ಪರೋಕ್ಷವಾಗಿ ಎಲ್ಲೆಲ್ಲಿ ಗ್ಯಾಪ್ಸ್ ಇರುತ್ತದೆ, ಲೂಪ್ ಹೋಲ್ಸ್ ಇರುತ್ತದೆ ಅದನ್ನು ಉಪಯೋಗ ಮಾಡಿಕೊಂಡು ವಿಕೃತ ದಾರಿ ಹಿಡಿದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಸಹಕಾರಿಯಲ್ಲ.
10ನೇ ಶೆಡ್ಯೂಲ್ ಬಗ್ಗೆ ಕುಮಾರಸ್ವಾಮಿಯವರು, ಸಿದ್ದರಾಮಯ್ಯನವರು, ಪಾಟೀಲ್ ಅವರು ಒಳ್ಳೆ ಮಾತುಗಳನ್ನು ಹೇಳಿದ್ದಾರೆ. ನಾನು ಎಲ್ಲರ ನಂಬಿಕೆ ಅರ್ಹನಾಗಿ ಬದುಕುವ ಪ್ರಯತ್ನ ಮಾಡುತ್ತೇನೆ. ನಾನು ಯಾವುದೇ ಇತಿಹಾಸ ನಿರ್ಮಾಣ ಮಾಡಲು ಹೋಗಿಲ್ಲ, ಆ ಭ್ರಮೆಗಳಲ್ಲಿ ನಾನಿಲ್ಲ. ನನ್ನ ಕರ್ತವ್ಯವನ್ನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಾನು ಮಾಡಿದ್ದೇನೆ.
ನಾನು ಒತ್ತಡಗಳಿಗೆ ಮಣಿಯೋದಿಲ್ಲ. ಯಾರ ಮೇಲೂ ಒತ್ತಡ ಹೇರುವ ಸ್ವಭಾವ ನನ್ನದಲ್ಲ. ನನ್ನನ್ನು ವಿಮರ್ಶೆ ಮಾಡುವವರನ್ನು ಗೌರವಿಸುತ್ತೇನೆ. ಅದನ್ನು ಸ್ವಾಗತಿಸುತ್ತೇನೆ.
10 ಶೆಡ್ಯೂಲ್ ನಲ್ಲಿ ಏನಿದೆ, ನಾವು ಬಯಸಿದಷ್ಟು ಈ ಉದ್ದೇಶವನ್ನು ನಿಗ್ರಹಿಸಲಿಕ್ಕೆ, ಸಾಧಿಸಲಿಕ್ಕೆ 10 ಶೆಡ್ಯೂಲ್ ಫಲಕಾರಿಯಾಗಿಲ್ಲ.
10 ಶೆಡ್ಯೂಲ್ ಅನ್ನು ಪುನರ್ ವಿಮರ್ಶೆ ಮಾಡುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದ ರಮೇಶ್ ಕುಮಾರ್. ಈ ಸದನಕ್ಕೆ ಪುನರ್ ವಿಮರ್ಶೆ ಮಾಡುವ ಅಧಿಕಾರವಿಲ್ಲ. ಆದರೆ ಪುನರ್ ವಿಮರ್ಶೆ ಮಾಡಿ ಎಂದು ಹೇಳುವ ಅಧಿಕಾರವಿದೆ.
ನಾವು ಅದನ್ನು ಮಾಡಿದರೆ ದೇಶದ ಇತರ ವಿಧಾನಸಭೆಗಳಿಗೆ ಮನವಿ ಮಾಡಿ, ಪ್ರಧಾನಿ, ಸಂಸತ್ತಿನ ಮೇಲೆ ಒತ್ತಡ ತಂದು ಈ ಕಾನೂನನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯವಿದೆ.
ಯಾವ ಉದ್ದೇಶಕ್ಕಾಗಿ ಇದನ್ನು ಮಾಡಬೇಕಾಯ್ತು ಆ ಉದ್ದೇಶ ಇನ್ನೂ ಹೆಚ್ಚು ಪ್ರಭಾಯುತವಾಗಿ ದೇಶದಲ್ಲಿ ಇರಬೇಕು. ಸಂಸದೀಯ ಪ್ರಜಾಪ್ರಭುತ್ವ ಉಳಿಯಬೇಕು.ನಾವು ನೀವು ಪಾರ್ಟಿಗಳು ಇನ್ನೊಂದು ಮತ್ತೊಂದು ಉಳಿಯೋದು ಮುಖ್ಯವಲ್ಲ ಅಂದರು.
Discussion about this post