cement garlic ಅಸಲಿ ಬೆಳ್ಳುಳ್ಳಿ ಜೊತೆ ಸಿಮೆಂಟ್ ಬೆಳ್ಳುಳ್ಳಿ ಮಿಕ್ಸ್
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕೆಜಿಗೆ 350 ರೂಪಾಯಿಗೆ ಏರಿದ್ದು, ಈ ನಡುವೆ ಸಿಮೆಂಟ್ ಬೆಳ್ಳುಳ್ಳಿಯ ( cement garlic ) ಪ್ರತಿಕೃತಿ ಮಾಡಿ ಅದನ್ನು ನಿಜವಾದ ಬೆಳ್ಳುಳ್ಳಿ ಜೊತೆ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂತಹುದೊಂದು ವಿಚಿತ್ರ ದಂಧೆ ಮಹಾರಾಷ್ಟ್ರದ ಹಲವು ಕಡೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಮಾರಾಟಕ್ಕೆ ಇಟ್ಟಿದ್ದ ನಿಜವಾದ ಬೆಳ್ಳುಳ್ಳಿ ಜೊತೆಗೆ ಅಸಲಿ ಬೆಳ್ಳುಳ್ಳಿಯನ್ನೋ ಹೋಲುವ ಸಿಮೆಂಟ್ ಬೆಳ್ಳುಳ್ಳಿ ಪತ್ತೆಯಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ
ಮಹಾರಾಷ್ಟ್ರದ ನಿವೃತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅನ್ನುವವರ ಪತ್ನಿ ಮಾರುಕಟ್ಟೆಯಿಂದ ಕಾಲು ಕೆಜಿ ಬೆಳ್ಳುಳ್ಳಿ ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಸಿಪ್ಪೆ ಬಿಡಿಸಲು ಹೋದಾಗ ಸಾಧ್ಯವಾಗಲಿಲ್ಲ. ಚಾಕುವಿನಿಂದ ಕತ್ತರಿಸಲು ಪ್ರಾರಂಭಿಸಿದ್ರೆ ಬೆಳ್ಳುಳ್ಳಿಯ ಅಸಲಿ ಕಥೆ ಬಯಲಾಗಿದೆ.
ಈ ಬಗ್ಗೆ ತಾವು ಮೋಸ ಹೋಗಿರೋದು ಗೊತ್ತಾಗುತ್ತಿದ್ದಂತೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೆಳ್ಳುಳ್ಳಿ ದರ ಏರಿಕೆಯ ಹಿನ್ನಲೆಯಲ್ಲಿ ಹೆಚ್ಚಿನ ಲಾಭ ಗಳಿಸಲು ವ್ಯಾಪಾರಿಗಳು ತೂಕ ಹೆಚ್ಚಿಸೋ ತಂತ್ರಕ್ಕೆ ಮೊರೆ ಹೋಗಿರೋದು ಗೊತ್ತಾಗಿದೆ. ಈ ನಡುವೆ ಬೆಳ್ಳುಳ್ಳಿ ಖರೀದಿಸಿದ ಅನೇಕರು ನಕಲಿ ಬೆಳ್ಳುಳ್ಳಿ ಒಡೆದಾಗ ಸಿಮೆಂಟ್ ಪುಡಿ ಉದುರಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
Fake garlic made of cement being sold in Maharashtra amid rising prices A retired police officer was also scammed