ಉಡುಪಿ : ಕಟಪಾಡಿ ಕೋಟೆ ಅಂಬಾಡಿಯ ಕೃಷಿಕ ಸುಂದರ ಪೂಜಾರಿ ಅವರ ಗದ್ದೆಯಲ್ಲಿ ನೇಜಿ ಮಾಡುವಾಗ ದೊಡ್ಡ ಗಾತ್ರದ ಎರಡು ಮೀನುಗಳು ಪತ್ತೆಯಾಗಿತ್ತು. ತೋಡು ಅಥವಾ ಹರಿಯುವ ನೀರಿನ ಪಕ್ಕದಲ್ಲಿ ಗದ್ದೆ ಇದ್ದಾಗ ಮುಗುಡು ಮೀನುಗಳು ಗದ್ದೆಯಲ್ಲಿ ಪತ್ತೆಯಾಗುವುದು ಸಹಜ. ಇತ್ತೀಚೆಗೆ ಗದ್ದೆ ಹಾಗೂ ಕೃಷಿ ತೋಟಕ್ಕೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಸುರಿಯುತ್ತಿರುವ ಕಾರಣ ಮೀನು ಸೇರಿದಂತೆ ಯಾವುದೇ ಇತರ ಮನುಷ್ಯ ಸೇವನೆಗೆ ಅರ್ಹವಾದ ಜೀವಿಗಳು ಸಿಗುತ್ತಿಲ್ಲ.
ಇನ್ನು ಸುಂದರ ಪೂಜಾರಿ ಗದ್ದೆಯಲ್ಲಿ ಪತ್ತೆಯಾದ ಮುಗುಡು ಮೀನುಗಳು ಸಾವಿರಾರು ರೂಪಾಯಿ ಬೆಲೆ ಬಾಳುತ್ತದೆ., ಮಾರುಕಟ್ಟೆಗೆ ಒಯ್ದರೆ ಸಾವಿರಾರು ರೂಪಾಯಿ ಗ್ಯಾರಂಟಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ.
ಆದರೆ ಮುಗಡು ಜಾತಿಯ ಮೀನುಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಖರೀದಿಸುವ ಮಂದಿ ಕರಾವಳಿಯಲ್ಲಿ ಇಲ್ಲ. ಜೊತೆಗೆ ಈ ಜಾತಿಯ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡಾ ಇಲ್ಲ. ಹೀಗಾಗಿ 10 ಕೆಜಿ ತೂಕದ ಈ ಮೀನುಗಳಿಗೆ ಸಾವಿರ ರೂಪಾಯಿ ಸಿಕ್ರೆ ಪುಣ್ಯ.
Discussion about this post