ಈ ಬಹುರಾಷ್ಟ್ರೀಯ ಕಂಪನಿಗಳಿಗೆ ನೌಕರರ ಬದುಕಿನಲ್ಲಿ ಆಟ ಆಡುವುದಂದ್ರೆ ಅದೇನೋ ಖುಷಿ, ನೌಕರರ ನೋವಿನಲ್ಲಿ ಅವರಿಗೆ ಸಂಭ್ರಮ ( facebook meta)
ನ್ಯೂಯಾರ್ಕ್ : ವಿಶ್ವ ಆರ್ಥಿಕ ಹಿಂಜರಿತ ಭೀತಿಯ ನಡುವೆ ಐಟಿ ಕಂಪನಿಗಳು ಆತಂಕದಲ್ಲಿದೆ. ತಮ್ಮ ಉದ್ಯೋಗದ ಕಥೆಯೇನು ಅನ್ನುವ ಆತಂಕ ಐಟಿ ಉದ್ಯೋಗಿಗಳನ್ನು ಕಾಡುತ್ತಿದೆ. ಈ ನಡುವೆ ಅಮೆರಿಕಾ ಮೂಲದ ಫೇಸ್ ಬುಕ್, ಇನ್ಸ್ಟಾ ಮತ್ತು ವಾಟ್ಸಾಪ್ ನ ಮಾತೃ ಸಂಸ್ಥೆ ಮೆಟಾ ಒಂದೇ ದಿನ 11 ಸಾವಿರ ಜನರನ್ನು ಕೆಲಸದಿಂದ ತೆಗೆದು ಹಾಕಿದೆ. ( facebook meta fires employees) 87 ಸಾವಿರ ಸಿಬ್ಬಂದಿಗಳ ಪೈಕಿ ಶೇ 13ರಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ( facebook meta)
ಭಾರತದಲ್ಲೂ ಮೆಟಾದಲ್ಲಿ 400ರಷ್ಟು ಮಂದಿ ಕೆಲಸ ಮಾಡುತ್ತಿದ್ದು, ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ ಎಂದು ಗೊತ್ತಾಗಿಲ್ಲ. ಈ ಹಿಂದೆ ಟ್ವೀಟರ್ 7500 ಸಿಬ್ಬಂದಿಯ ಪೈಕಿ ಶೇ50ರಷ್ಟು ಉದ್ಯೋಗಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದೆ. ಇದರ ಬೆನ್ನಲ್ಲೇ ಟ್ವೀಟರ್ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿತ್ತು. ವಜಾಗೊಂಡ ನೌಕರರ ಪೈಕಿ ಕೆಲವರ ಮತ್ತೆ ವಾಪಾಸ್ ಕರೆಸಿಕೊಳ್ಳಲು ಪರದಾಡುತ್ತಿದೆ.
Read More : Honey trap : ಮಂಚದಾಟಕ್ಕೆ ಮನೆಗೆ ಆಹ್ವಾನ : ಹನಿಟ್ರ್ಯಾಪ್’ಗೆ ಪ್ರಿಯತಮೆಯನ್ನೇ ಬಿಟ್ಟಿದ್ದ ಪ್ರೇಮಿ
ವಜಾ ಯಾಕೆ…?
ಕೊರೋನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ನೌಕರರ ನೇಮಕವಾಗಿತ್ತು. ಕೊರೋನಾ ಬಳಿಕ ಉತ್ತಮ ಬೆಳವಣಿಗೆಯ ನಿರೀಕ್ಷೆ ಕಂಪನಿಯದ್ದಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲು ಸಂಸ್ಥೆಗೆ ಸಾಧ್ಯವಾಗಲಿಲ್ಲ. ಕೋವಿಡ್ ಕಾಲದಲ್ಲಿ ಜವ ಮನೆಯಲ್ಲೇ ಇದ್ದ ಕಾರಣ ಇಂಟರ್ ನೆಟ್ ಬಳಕೆ ಹೆಚ್ಚಾಗಿತ್ತು. ಮೆಟಾದ ಎಲ್ಲಾ ಕಂಪನಿಗಳ ಆದಾಯ ಗಗನಮುಖಿಯಾಗಿತ್ತು. ಹೀಗಾಗಿ ಭರ್ಜರಿ ನೇಮಕಾತಿಯೂ ನಡೆದಿತ್ತು. ಕೊರೋನಾ ಮುಗಿಯಿತು, ಆದಾಯ ಪಾತಾಳಕ್ಕೆ ಮುಖ ಮಾಡಿದೆ.
ಈ ಹಣಕಾಸು ವರ್ಷದ ಮೂರನೇ ತ್ರೈ ಮಾಸಿಕ ಆದಾಯ ಲಾಭ 36 ಸಾವಿರ ಕೋಟಿಯಷ್ಟಿತ್ತು. ಈ ಹಿಂದಿನ ವರ್ಷದ ಇದೇ ಅವಧಿಯ ಆದಾಯ 75 ಸಾವಿರ ಕೋಟಿಯಾಗಿತ್ತು. ಇನ್ನು ಒಟ್ಟಾರೆ ಕಂಪನಿಯ ಆದಾಯ ಕೂಡಾ ಕುಸಿತವಾಗಿದೆ. ಕಳೆದ ವರ್ಷ 2.38 ಲಕ್ಷ ಕೋಟಿ ಆದಾಯ ಸಂಪಾದಿಸಿದ್ದ ಮೆಟಾ ಈ ಬಾರಿ 2.27 ಲಕ್ಷ ಕೋಟಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಇದರೊಂದಿಗೆ ಹೊಸ ಹೊಸ ಸೋಷಿಯಲ್ ಮೀಡಿಯಾ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿದೆ. ಸಹಜವಾಗಿಯೇ ಇದರಿಂದ ಫೇಸ್ ಬುಕ್, ವಾಟ್ಸಾಪ್ ಲಾಭ ಕುಸಿಯಲಾರಂಭಿಸಿದೆ.
Discussion about this post