ತೆಲುಗಿನ ಸಾವಿತ್ರಮ್ಮಗಾರಿ ಅಬ್ಬಾಯಿ ಧಾರಾವಾಹಿಯ ಮೇಜರ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಚಂದನ್ ಮೊನ್ನೆ ಮೊನ್ನೆ ಧಾರವಾಹಿ ತಂಡದಿಂದ ಹೊರ ಬಂದಿದ್ದರು.
ಏನ್ ಸಾರ್ ದಿಢೀರ್ ನಿರ್ಧಾರ ಅಂದ್ರೆ ಒಂದಿಷ್ಟು ಕೆಲಸಗಳಿವೆ, ಮದುವೆ ಸಿದ್ದತೆ ನಡೆಯಬೇಕು ಅಂದಿದ್ದರು.
ಆಗ ಮದುವೆ ಹುಡುಗಿ ಕವಿತಾ ಅವರೇ ಎಂದು ಕೇಳಿದರೆ, ಯಸ್ ಅಂದ್ರೆ ಅದೇ ಸುದ್ದಿ ಹರಡುತ್ತದೆ, ನೋ ಅಂದರೆ ಮತ್ಯಾರು ಅನ್ನುವ ಪ್ರಶ್ನೆ ಕಾಣಿಸುತ್ತದೆ., ಹಾಗಾಗಿ ಎರಡೂ ಬೇಡ ಅಂದಿದ್ದರು.
ಆದಾದ ಬಳಿಕ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನಾನು ಮದುವೆಯಾಗುತ್ತಿರುವ ಹುಡುಗಿ ಕವಿತಾ ಅನ್ನುವುದನ್ನು ಅಧಿಕೃತಗೊಳಿಸಿದ್ದರು. ಹೀಗಾಗಿ ಏಪ್ರಿಲ್ 1 ರಂದು ಕವಿತಾ ಚಂದನ್ ವಿವಾಹ ನಡೆಯಲಿದೆ ಅನ್ನುವ ಸುದ್ದಿ ಹರಡಿತ್ತು.
ಇದನ್ನೂ ಓದಿ : ಇದು ಏಪ್ರಿಲ್ ಫೂಲ್ ಅಲ್ಲ.. ದೊನ್ನೆ ಬಿರಿಯಾನಿ ಮಾಲಕನೊಂದಿಗೆ ಕವಿತಾ ಮದುವೆ…
ಆದರೆ ಇಂದು ನಡೆದಿದ್ದು ಕವಿತಾ ಹಾಗೂ ಚಂದನ್ ಮದುವೆಯಲ್ಲ ಬದಲಿಗೆ ನಿಶ್ಚಿತಾರ್ಥ.
ಸರಳವಾಗಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಂದನ್ ಹಾಗೂ ಕವಿತಾ ಅವರ ಕೆಲವೇ ಕೆಲವು ಆತ್ಮೀಯರು ಮಾತ್ರ ಹಾಜರಿದ್ದರು. ಇನ್ನುಳಿದಂತೆ ಎರಡೂ ಕಡೆಯ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.
Discussion about this post