ನಮ್ಮ ಮನೆಯ ಫಾರ್ಮ್ಹೌಸ್ ಮೇಲೆ ದಾಳಿ ನಡೆದಿರೋದು ನಿಜ. ಡೈರಿಯೂ ಸಿಕ್ಕಿದೆ. ಖಂಡಿತಾ ಡೈರಿ ಇಟ್ಟಿದ್ದೇನೆ. ಆದ್ರೆ ಆ ಡೈರಿಯಲ್ಲಿ ನಮ್ಮ ಹಸುಗಳು ಎಷ್ಟು ಹಾಲು ಕೊಡುತ್ತವೆ. ಬೆಳಗ್ಗೆ ಸಂಜೆ ಎಷ್ಟು ಲೀಟರು ಹಾಲು ಹಾಕ್ತೀವಿ, ಹಸುವಿಗೆ ಇಂಜೆಕ್ಷನ್ ಯಾವಾ ಕೊಟ್ಟಿದ್ದೇವೆ.ಕರು ಯಾವಾಗ ಹಾಕುತ್ತೇ. ಕೋಳಿ ಮೊಟ್ಟೆ ಇವತ್ತು ಕಾವಿಗೆ ಕೂರಿಸಿದ್ದೇವೆ, 18 ದಿನಕ್ಕೆ ಯಾವಾಗ ಒಡೆಯುತ್ತದೆ ಎಂದು ಬರೆದಿಟ್ಟಿದ್ದೇನೆ. ಇನ್ನು ಲೆಕ್ಕ ತೆಗೆದುಕೊಳ್ಳುತ್ತಿದ್ದಾರೆ. ಚೆನ್ನಾಗಿ ಇರಲಿ ಎಂದು ದರ್ಶನ್ ಹೇಳಿದ್ದಾರೆ.
ಆದರೆ ಅಮ್ಮ ಐಟಿ ರೈಡ್ ಮಾಡಿಸ್ತಾರೆ ಅಂದ್ರು ಎನಣ್ಣ ಇದೆಲ್ಲ ಅಂದ ದರ್ಶನ್, ತಮ್ಮ ತಂದೆಯ ಸಾವಿನ ಕ್ಷಣವನ್ನು ನೆನಪಿಸಿಕೊಂಡರು.
ನನ್ನ ತಂದೆ ಇದ್ದಾಗ ಅಕ್ಕ ಪಕ್ಕ ಎಷ್ಟು ಜನ ಇದ್ರು, ಹೇಂಗಿದ್ರು ಅನ್ನೋದನ್ನ ನೋಡಿದ್ದೀನಿ. 11 ದಿನಕ್ಕೆ ಮನೆ ಖಾಲಿಯಾಗಿತ್ತು. ಹೇಗೆ ಖಾಲಿಯಾಯ್ತು ಅಂತಾನೆ ಗೊತ್ತಾಗಲಿಲ್ಲ. ಈಗ ನಿಮ್ಮ ತಂದೆ ಗೆಳೆಯ ಅಂತಾ ಸುಮಾರು ಜನ ಬರ್ತಾರೆ, ಅವರ ಕಡೆ ಮುಖವನ್ನು ತೋರಿಸಲ್ಲ, ಹೋಗಯ್ಯ ಅಂತೀನಿ. ವಯಸ್ಸು ಕೂಡಾ ನೋಡಲ್ಲ.
ಇದನ್ನೇ ಅಭಿಗೂ ಹೇಳಿದ್ದೆ. ಈಗಿಲ್ಲ ಚಿನ್ನ 11 ನೇ ದಿನ ಆದ ಮೇಲೆ ಅಂತಾ ಎಂದರು.
Discussion about this post