Jet airways ಉದ್ದಾರಕ್ಕಾಗಿ ಪಡೆದ ಸಾಲದಲ್ಲಿ ಬಟ್ಟೆ ಬರೆ ಮೇಜು ಕುರ್ಚಿಗಳನ್ನು ಖರೀದಿಸಲಾಗಿತ್ತು
ಕೆನರಾ ಬ್ಯಾಂಕ್ನಲ್ಲಿ 538 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಕುರಿತಂತೆ ಬಂಧನಕ್ಕೊಳಗಾಗಿರುವ ಜೆಟ್ ಏರ್ವೇಸ್ (Jet airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal) ಮತ್ತು ಅವರ ಕುಟುಂಬ ಸದಸ್ಯರು ಮತ್ತು ಅವರ ಕಂಪನಿಗಳಿಗೆ ಸೇರಿದ 538 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.
ಈ ಸಂಬಂಧ ಇಡಿ ಪ್ರಕಟಣೆಯನ್ನು ಹೊರಡಿಸಿದ್ದು, ನರೇಶ್ ಗೋಯಲ್, ಅವರ ಪತ್ನಿ ಶ್ರೀಮತಿ ಅನಿತಾ ಗೋಯಲ್ ಹಾಗೂ ಪುತ್ರ ನಿವಾನ್ ಗೋಯಲ್, ಜೆಟ್ ಏರ್ ಪ್ರೈವೇಟ್ ಲಿಮಿಟೆಡ್ ಸಂಬಂಧಿಸಿದ ವಿವಿಧ ವ್ಯಕ್ತಿಗಳು ಮತ್ತು ಕಂಪನಿಗಳ ಹೆಸರಿನಲ್ಲಿದ್ದ 17 ವಸತಿ ಬಂಗಲೆಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ ಅಂದಿದೆ,
ಭಾರತದ ಕೆಲ ರಾಜ್ಯಗಳಲ್ಲಿ ಹಾಗೂ ಲಂಡನ್ ಮತ್ತು ದುಬೈನಲ್ಲಿರುವ 17 ಫ್ಲ್ಯಾಟ್, ಬಂಗಲೆ ಹಾಗೂ ಕಮರ್ಷಿಯಲ್ ಬಿಲ್ಡಿಂಗ್ ಗಳು ಇದರಲ್ಲಿ ಸೇರಿದೆ.
ಇದನ್ನೂ ಓದಿ : ನಿರ್ಜಲೀಕರಣದ 10 ಲಕ್ಷಣಗಳು
ಕೆನರಾ ಬ್ಯಾಂಕ್ ಗೆ ವಂಚಿಸಿದ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ನಲ್ಲಿ ಬಂಧಿಸಲ್ಪಟ್ಟ ನರೇಶ್ ಗೋಯಲ್ ಪ್ರಸ್ತುತ ಮುಂಬೈನ ಜೈಲಿನಲ್ಲಿದ್ದಾರೆ. ನರೇಶ್ ಗೋಯಲ್ ವಿರುದ್ಧ ಇಡಿ ಮಂಗಳವಾರ ಚಾರ್ಜ್ಶೀಟ್ ಸಲ್ಲಿಸಿದ್ದು, ಬುಧವಾರ ಆಸ್ತಿ ಜಪ್ತಿಯ ಬೆಳವಣಿಗೆ ನಡೆದಿದೆ.
ಪ್ರಕರಣದ ಹಿನ್ನಲೆ
ಮನಿ ಲಾಂಡರಿಂಗ್ ಪ್ರಕರಣವನ್ನು ಮೊದಲು ಬಹಿರಂಗಗೊಳಿಸಿದ್ದು ಕೆನರಾ ಬ್ಯಾಂಕ್, ತನ್ನಿಂದ ನರೇಶ್ ಗೋಯಲ್ ಪಡೆದ 848 ಕೋಟಿ ರೂಪಾಯಿ ಸಾಲದ ಮರು ಪಾವತಿಯಲ್ಲಿ ವಿಳಂಭವಾಗುತ್ತಿರುವುದನ್ನು ಗಮನಿಸಿದ ಬ್ಯಾಂಕ್ ಸಾಲದ ಹಣದ ಬಳಕೆ ಕುರಿತಂತೆ ಆಡಿಟ್ ಪ್ರಕ್ರಿಯೆ ನಡೆಸಿತ್ತು. ಬ್ಯಾಂಕ್ ನಿಂದ ನೀಡಲಾದ 848 ಕೋಟಿ ರೂಪಾಯಿ ಪೈಕಿ 538 ಕೋಟಿ ರೂ ಸಾಲ ಪಾವತಿಯಾಗದೇ ಉಳಿದಿತ್ತು.
ಇದನ್ನೂ ಓದಿ : ನಿಮಗೆ ನಿದ್ರಾಹೀನತೆ ಸಮಸ್ಯೆಯೇ ಹೀಗೆ ಮಾಡಿ
ಅಡಿಟ್ ಸಂದರ್ಭದಲ್ಲಿ ಜೆಟ್ ಏರ್ ವೇಸ್ ಸಂಸ್ಥೆ ಬ್ಯಾಂಕ್ನ ಸಾಲದ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿರುವುದು ಬೆಳಕಿಗೆ ಬಂದಿತ್ತು. ಬೇರೆ ದೇಶಗಳಲ್ಲಿ ಟ್ರಸ್ಟ್ಗಳನ್ನು ರಚಿಸಿ ಅಲ್ಲಿಗೆ ಹಣ ವರ್ಗಾಯಿಸಿ, ಆ ಟ್ರಸ್ಟ್ಗಳ ಮೂಲಕ ಚಿರಾಸ್ತಿಗಳನ್ನು ಖರೀದಿಸಿರೋದು ಗೊತ್ತಾಗಿತ್ತು. ಅಷ್ಟೇ ಅಲ್ಲದೆ ಇದೇ ಸಾಲದ ಮೊತ್ತದಲ್ಲಿ ಬಟ್ಟೆಬರೆ, ಪೀಠೋಪಕರಣ, ಒಡವೆ ಇತ್ಯಾದಿಗಳನ್ನು ಗೋಯಲ್ ಕುಟುಂಬ ಸದಸ್ಯರು ಖರೀದಿಸಿದ್ದರಂತೆ.
ಆದರೆ ನರೇಶ್ ಗೋಯಲ್ ತಾವು ಸಾಲದ ಹಣವನ್ನು ಬಳಸಿದ ರೀತಿಯನ್ನು ಸಮರ್ಥಿಸಿಕೊಂಡಿದ್ದರು. ವಿಮಾನಯಾನ ಕ್ಷೇತ್ರ ಬ್ಯಾಂಕ್ ಸಾಲದ ಮೇಲೆ ನಿಂತಿರುತ್ತದೆ. ಸಾಲದ ಹಣದ ಬಳಕೆಯನ್ನು ಮನಿ ಲಾಂಡರಿಂಗ್ ಅನ್ನಲಾಗದು ಅಂದಿದ್ದರು.
Jet Airways founder Naresh Goyal siphoned off public funds obtained as business loans in commission to sales agents, personal and family expenses, loans to subsidiary companies with no business or income, etc.
Discussion about this post