ಗೋಪಾಲನಾಥ್ ಅವರು ಹುಟ್ಟಿದು ದಕ್ಷಿಣ ಕನ್ನಡ ಬಂಟ್ವಾಳ
ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ. ತಂದೆ ತನಿಯಪ್ಪ ಅವರು ನಾಗಸ್ವರ ವಿದ್ವಾಂಸರಾಗಿದ್ದರಿಂದ
ಸಂಗೀತ ಅನ್ನುವುದು ಗೋಪಾಲನಾಥರಿಗೆ ದಿನಚರಿಯಾಗಿತ್ತು.
ಹೀಗಾಗಿ ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣ ಪಡೆದರು. ಆದರೆ ಅವರ ಸಂಗೀತ ಬದುಕಿಗೆ ತಿರುವು ಕೊಟ್ಟಿದ್ದು ಮೈಸೂರು.
ಅದೊಂದು ದಿನ ಮೈಸೂರು ಅರಮನೆಯ ಬ್ಯಾಂಡ್ ಸೆಟ್ ನೊಂದಿಗೆ
ಸ್ಯಾಕ್ಸೋಫೋನ್ ವಾದನ ಕೇಳಿ, ಅದಕ್ಕೆ ಮನ ಸೋತರು. ಹೀಗಾಗಿ ಸ್ಯಾಕ್ಸೋಫೋನ್ ನುಡಿಸಬೇಕು ಎಂದು
ನಿರ್ಧರಿಸಿದ ಅವರು ಪ್ರಯತ್ನ ಪ್ರಾರಂಭಿಸಿದರು. ಅಂದ ಹಾಗೇ ಅವರೊಬ್ಬ ಸ್ಯಾಕ್ಸೋಫೋನ್ ಕಲಾವಿದ
ಅನ್ನಿಸಿಕೊಳ್ಳಬೇಕಾದರೆ 20 ವರ್ಷಗಳ ಕಾಲ ಬೇಕಾಯಿತು.
ಕಲಾ ನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸೋಫೋನ್
ಅನ್ನು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು.
ಮುಂದೆ ಕದ್ರಿಯವರಿಗೆ ಮದ್ರಾಸಿನ ಟಿವಿ ಗೋಪಾಲಕೃಷ್ಣನ್ ಸಂಪರ್ಕ
ಸಿಕ್ತು. ಕದ್ರಿಯವರ ಪ್ರತಿಭೆಯನ್ನು ಗಮನಿಸಿದ ಅವರು ಅಂತರರಾಷ್ಟ್ರೀಯ ಪ್ರತಿಭೆಯಾಗಿ
ರೂಪುಗೊಳ್ಳಲು ಕಾರಣರಾದರು.
ಕದ್ರಿಯವರು ಅದೆಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದರು ಅಂದ್ರೆ ಸ್ಯಾಕ್ಸೋಫೋನ್ ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್ ಅನ್ನುವಂತಾಗಿತ್ತು. ಇನ್ನು ಇದೇ ವಾದ್ಯಕ್ಕೆ ಮಂಗಳವಾದ್ಯ ಅನ್ನುವ ಪಟ್ಟವನ್ನು ಕಟ್ಟಿದ ಕೀರ್ತಿಯೂ ಗೋಪಾಲನಾಥ್ ಅವರಿಗೆ ಸಲ್ಲಬೇಕು.
ಅದೊಂದು ಸಲ ಬಿಬಿಸಿಯವರು ಸಂಗೀತ ಕಛೇರಿ ಸಲುವಾಗಿ ನಾಲ್ವರನ್ನು ಲಂಡನ್ ಗೆ ಆಹ್ವಾನಿಸಿದ್ದರು. ಆ ಪೈಕಿ ಮೂವರು ಹಿಂದೂಸ್ತಾನಿಗಳಾಗಿದ್ದರೆ, ಕದ್ರಿ ಮಾತ್ರ ಕರ್ನಾಟಕಿಯಾಗಿದ್ದರು. ಈ ವೇಳೆ ಯಾರಿಗೆ ಮೊದಲ ಅವಕಾಶ ಕೊಡುವುದು ಅನ್ನುವ ಗೊಂದಲ ಬಿಬಿಸಿ ಮಂದಿಗೆ ಉಂಟಾಯ್ತು. ಆ ವೇಳೆ ಬಿಬಿಸಿ ಮಂದಿ ಮೊದಲು ಆಯ್ಕೆ ಮಾಡಿದ್ದು ಕದ್ರಿಯವರನ್ನು. ಕಾರಣ ಕದ್ರಿಯವರ ಕೈಯಲ್ಲಿದದ್ದು ಆ ದೇಶದ ವಾದ್ಯ.
ಇಷ್ಟೊಂದು ಅದ್ಭುತ ಕಲಾವಿದ ಮಾತಿಗೆ ಕುಳಿತರೆ ಎದ್ದೇಳುವುದೇ ಇಲ್ಲ. ಸ್ಯಾಕ್ಸೋಫೋನ್ ಹಿಡಿದರೆ ಹೇಗೆ ಸಂಗೀತದ ಅಲೆ ಏಳುತ್ತದೆಯೋ, ಮಾತಿಗೆ ಕುಳಿತರೆ ನಗುವಿನ ಅಲೆ ಉಕ್ಕುತ್ತದೆ. ಹಾಸ್ಯ ಚಟಾಕಿಗಳಿಲ್ಲದೆ ಅವರು ಮಾತು ಮುಂದುವರಿಸುತ್ತಿರಲಿಲ್ಲ. ಜೋರಾದ ನಗುವಿನೊಂದಿಗೆ ಆತ್ಮೀಯರಾಗುತ್ತಿದ್ದರು.
Discussion about this post