ಬೆಂಗಳೂರು : ಅದ್ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಹೇಳುವುದು ಒಂದೇ ಮಾತು ನಮ್ದು ರೈತ ಪರ ಸರ್ಕಾರ. ಆದರೆ ಮಾಡುವುದು ಮಾತ್ರ ಬೆನ್ನಿಗೆ ಚೂರಿ ಹಾಕುವ ಕೆಲಸ.
ಇದೀಗ ಈಗಿನ ರಾಜ್ಯ ಸರ್ಕಾರದ ಕಥೆಯೂ ಅದೇ ಆಗಿದೆ. ರೈತರ ಪರವಾಗಿದ್ದೇವೆ ಅನ್ನುವ ಸರ್ಕಾರ ಸದ್ದಿಲದ್ದೆ ಅಡಿಕೆಗೆ ಡ್ರಗ್ಸ್ ಪಟ್ಟ ಕಟ್ಟಿದೆ.
ಸಹಕಾರ ಖಾತೆಯ ಅಡಿಯಲ್ಲಿ ಬರುವ ಕರ್ನಾಟ ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕೃತ ವೆಬ್ ಸೈಟ್ ಕೃಷಿ ಮಾರಾಟ ವಾಹಿನಿಯಲ್ಲಿ ಅಡಕೆಯನ್ನು Drugs & Narcotics ವಿಭಾಗದಲ್ಲಿ ತೋರಿಸಲಾಗಿದೆ.
ಈಗಾಗಲೇ ಅಡಕೆಯ ವಿಚಾರದಲ್ಲಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿದೆ. ಅದು ಕ್ಯಾನ್ಸರ್ ಕಾರಕ ಅನ್ನುವ ಪಟ್ಟ ಕಟ್ಟಿ ಅಡಕೆ ಬೆಳೆಗಾರರಿಗೆ ಚಟ್ಟ ಕಟ್ಟುವ ಕೆಲಸ ಈ ಹಿಂದೆ ನಡೆದಿತ್ತು. ಹಾಗೋ ಹೀಗೋ ಹೊಡೆದಾಡಿ ಬಡಿದಾಟಿದ ರೈತರು ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.
ಇದೀಗ ಮತ್ತೆ ಅಡಕೆ ಬೆಳೆಗಾರರನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಕೃಷಿ ಮಾರಾಟ ವಾಹಿನಿಯಲ್ಲೇ ಅಡಕೆಯನ್ನು ಮಾದಕ ವಸ್ತುಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಅಡಕೆಯನ್ನು ಶಾಶ್ವತವಾಗಿ ಅಪಾಯಕಾರಿ ವಸ್ತು ಎಂದು ದಾಖಲಿಸಲು ಹೊರಟಿರುವಂತಿದೆ.
ಚುನಾವಣೆ ಬಂದ್ರೆ ಸಾಕು ಅಡಕೆ ಬೆಳೆಗಾರರ ಮೇಲೆ ಇನ್ನಿಲ್ಲದ ಲವ್ ತೋರಿಸುವ ಜನಪ್ರತಿನಿಧಿಗಳು ಇದೀಗ ಸೈಲೆಂಟ್ ಆಗಿದ್ದಾರೆ. ಮತ್ತೊಂದು ಚುನಾವಣೆ ಬರಲಿ ಅಡಕೆಯನ್ನು ಡ್ರಗ್ಸ್ ಪಟ್ಟಿಯಿಂದ ತೆಗೆಯುತ್ತೇವೆ ಎಂದು ಭರವಸೆ ಕೊಡುತ್ತಾರೆ.
Discussion about this post