ಉದ್ಯಮಿ ಸಿದ್ಧಾರ್ಥ್ ಸೋಮವಾರ ಸಂಜೆ ಸುಮಾರು 7 ಗಂಟೆ ಮಂಗಳೂರಿನ ನೇತ್ರಾವತಿ ನದಿ ತೀರದಿಂದ ನಾಪತ್ತೆಯಾಗಿದ್ದಾರೆ. ಸಿದ್ದಾರ್ಥ್ ಅವರಿಗೆ ಏನಾಗಿದೆ ಅನ್ನುವ ಕುರಿತಂತೆ ಈವರೆಗೂ ಮಾಹಿತಿ ಲಭ್ಯವಾಗಿಲ್ಲ.
ಈ ನಡುವೆ ಸಿದ್ಧಾರ್ಥ್ ಅವರ ನಿಗೂಢ ನಾಪತ್ತೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿಕೊಂಡಿದ್ದಾರೆ.
ವಿವಿಧ ಆಯಾಮದಲ್ಲಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸಿದ್ಧಾರ್ಥ್ ಕಾರು ಚಾಲಕ ಬಸವರಾಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರೈವರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಿದ್ಧಾರ್ಥ್ ಅವರು ನಾಪತ್ತೆಯಾಗುವ ಮೊದಲು ಎಲ್ಲಿಗೆ ಹೋಗಿದ್ದರು, ಏನು ಮಾಡಿದರು ಎಂಬ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ.ಹೀಗಾಗಿ ಮತ್ತಷ್ಟು ಮಾಹಿತಿಗಾಗಿ ಯಾದಗಿರಿ ಮೂಲದ ಬಸವರಾಜು ಅವರನ್ನು ತನಿಖೆಗೆ ಒಳಪಡಿಸಲಾಗಿದೆ.
ನಾನು ಕಳೆದು ಮೂರು ವರ್ಷಗಳಿಂದ ಸಿದ್ಧಾರ್ಥ್ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಸದಾಶಿವನಗರದಲ್ಲಿರುವ ಸಿದ್ಧಾರ್ಥ್ ಅವರ ಮನೆಗೆ ಹೋಗಿದ್ದೆ. 8 ಗಂಟೆಗೆ ಸುಮಾರಿಗೆ ಸಿದ್ಧಾರ್ಥ್ ಅವರನ್ನು ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋದೆ. ಬೆಳಗ್ಗೆ 11 ಗಂಟೆ ಮನೆಗೆ ವಾಪಸ್ ಬಂದೆವು.
ಮನೆಗೆ ಬಂದ ಬಳಿಕ ಸಿದ್ಧಾರ್ಥ ಅವರು ಊರಿಗೆ ಹೋಗಬೇಕಾಗಿದ್ದು, ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ತಿಳಿಸಿದ್ದರು. ಅಂತೆಯೇ ಮನೆಗೆ ತೆರಳಿ ಲಗೇಜ್ ತೆಗೆದುಕೊಂಡು ಬಂದೆ. ಮಧ್ಯಾಹ್ನ 12.30ರ ಸುಮಾರಿಗೆ ಸಕಲೇಶಪುರದ ಕಡೆಗೆ ಹೋಗೋಣ ಎಂದರು. ಅದರಂತೆ KA-03 C-2592 ಸಂಖ್ಯೆಯ ಇನೋವಾ ಕಾರ್ನಲ್ಲಿ ತೆರಳಿದೇವು. ಸಕಲೇಶ್ಪರ ಸಮೀಪಿಸುತ್ತಿದ್ದಂತೆ ಮಂಗಳೂರು ಕಡೆ ಹೋಗೋಣ ಎಂದರು. ಅವರ ಮಾತಿನಂತೆ ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್ಗೆ ಬಂದಾಗ ಮಾಲೀಕರು ಎಡಗಡೆ ತೆಗೆದುಕೋ ಸೈಟ್ಗೆ ಹೋಗಬೇಕು ಎಂದು ಹೇಳಿದರು. ಅದರಂತೆ ಕೇರಳ ಹೈವೇ ರಸ್ತೆಯಿಂದ 0.3-0.4 ಕಿ.ಮೀ. ಸಾಗಿದಾಗನದಿಗೆ ಅಡ್ಡಲಾಗಿ ಕಟ್ಟಿರುವ ದೊಡ್ಡ ಸೇತವೆ ಆರಂಭವಾಗುತ್ತಿದ್ದಂತೆ ಕಾರ್ ನಿಲ್ಲಿಸಲು ಹೇಳಿದರು. ನಂತರ ಕಾರ್ನಿಂದ ಇಳಿದು, ನೀನು ಸೇತುವೆಯ ಆ ತುದಿ ಬಳಿ ಕಾರ್ ನಿಲ್ಲಿಸು. ನಾನು ವಾಕಿಂಗ್ ಮಾಡಿಕೊಂಡು ಬರುತ್ತೇನೆಂದು ಹೇಳಿದರು.
ಮಾಲೀಕರ ಮಾತಿನಂತೆ ಸೇತುವೆಯ ತುದಿಗೆ ಕಾರ್ ನಿಲ್ಲಿಸಿದೆ. ಅವರು ನನ್ನ ಬಳಿ ನಡೆದುಕೊಂಡು ಬಂದರು. ನೀನು ಕಾರ್ನಲ್ಲಿಯೇ ಕುಳಿತಿರು. ನಾನು ಬರ್ತಿನಿ ಎಂದು ಹೇಳಿ ಜೋಡಿ ರಸ್ತೆಯ ಬಲಭಾಗದ ಕಡೆಗೆ ಹೋಗಿ ವಾಪಸ್ ಬ್ರೀಡ್ಜ್ ದಾಟಿಕೊಂಡು ಮಂಗಳೂರು ಕಡೆ ಹೋದರು. ಸುಮಾರು 8 ಗಂಟೆ ಸಮಯದಲ್ಲಿ ಮಾಲೀಕರು ವಾಪಸ್ ಬಾರದ ಕಾರಣ ಅವರ ಮೊಬೈಲ್ಗೆ ಕರೆ ಮಾಡಿದೆ. ಆದರೆ, ಸ್ಪೀಚ್ ಆಫ್ ಆಗಿತ್ತು. ನಂತರ ಅವರ ಪುತ್ರ ಅಮಾರ್ತ್ಯ ಹೆಗ್ಡೆ ಅವರಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ ಎಂದು ಸಿದ್ಧಾರ್ಥ ಕಾರ್ ಡ್ರೈವರ್ ಬಸವರಾಜ್ ಪಾಟೀಲ್ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
Discussion about this post