ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ರಾಜಕಾರಣಿಗಳ ನೈತಿಕತೆಯ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ.
ಹಾಗಂತ ಇದೇನೂ ಮೊದಲ ಸಲವಲ್ಲ, ಈ ಹಿಂದೆಯೂ ಸಾಕಷ್ಟು ಬಾರಿ ಈ ಪ್ರಶ್ನೆ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ, ಜನ ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ ಎಂದು ಸದನದಲ್ಲೇ ಸದಸ್ಯರು ಹೇಳಿದ್ದರು.
ಆದರೆ ಈ ಬಾರಿ ಜಾರಕಿಹೊಳಿ ಸಿಡಿ ಸಿಡಿದ ಬೆನ್ನಲ್ಲೇ ನಡೆದ ಬೆಳವಣಿಗೆಗಳು ಹಲವು ಅನುಮಾನಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ಜಾರಕಿಹೊಳಿ ಜೊತೆಗೆ ಬಿಜೆಪಿ ಸೇರಿ ಸಚಿವರಾಗಿರುವ ಜನಪ್ರತಿನಿಧಿಗಳು ಇದೇ ವೇಳೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.
ಜೊತೆಗೆ ಕಾಂಗ್ರೆಸ್ ಕೂಡಾ ಈ ತಡೆಯಾಜ್ಞೆ ವಿರುದ್ಧ ಕಿಡಿ ಕಾರಿದೆ.
ಈ ಎಲ್ಲದರ ನಡುವೆ ಆರೋಗ್ಯ ಸಚಿವ ಡಾ. ಸುಧಾಕರ್ ರಾಜಕಾರಣಿಗಳ ನೈತಿಕತೆ ಕುರಿತಂತೆ ಬಾಂಬ್ ಸಿಡಿಸಿದ್ದಾರೆ.
ಸಿದ್ದು, ಹೆಚ್ಡಿಕೆ, ಡಿಕೆಶಿ ಏಕಪತ್ನಿವೃತಸ್ಥರಾ…? ಯಾರಿಗಿದೆ ಅನೈತಿಕ ಸಂಬಂಧ…? ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರರ..? ಯಾರಿಗೆ ಅನೈತಿಕ ಸಂಬಂಧವಿದೆ ಅನ್ನುವುದು ಸಾಬೀತಾಗಲಿ. 225 ಶಾಸಕರ ಬಗ್ಗೆಯೂ ತನಿಖೆಯಾಗಲಿ.
ಎಲ್ಲರ ಮೇಲೆ ತನಿಖೆಯಾದರೆ ಬಂಡವಾಳ ಬಯಲಾಗುತ್ತದೆ. ಯಾರ ಚರಿತ್ರೆ ಏನು ಅನ್ನುವುದು ಗೊತ್ತಾಗುತ್ತದೆ. ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಯಾರು ಏನು ಮಾಡಿದರು. ಯಾರಿಗೆ ಅನೈತಿಕ ಸಂಬಂಧವಿದೆ, ಯಾರಿಗೆ ವಿವಾಹಯೇತರ ಸಂಬಂಧವಿದೆ ಅನ್ನುವುದು ಗೊತ್ತಾಗಲಿ ಅಂದಿದ್ದಾರೆ.
ತನಿಖೆಯಲ್ಲಿ ಯಾರು ಶ್ರೀರಾಮಚಂದ್ರರು ಅನ್ನುವುದು ಬಯಲಾಗಲಿ ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ತನಿಖೆಯಲ್ಲಿ ಯಾರು ಶ್ರೀರಾಮಚಂದ್ರರು ಅನ್ನುವುದು ಬಯಲಾಗಲಿ ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ಸುಧಾಕರ್ ಅವರ ಸವಾಲಿನ ಮಾತು ಕೇಳಿದ್ರೆ ರಾಜಕಾರಣದಲ್ಲಿರುವವರೆಲ್ಲಾ ಅನೈತಿಕ ಸಂಬಂಧದಲ್ಲಿ ಇದ್ದಾರೆಯೇ, ಎಲ್ಲರ ಮನೆಯೂ ದೋಸೆಯೇ ತೂತೇ ಅನ್ನುವ ಪ್ರಶ್ನೆ ಹುಟ್ಟು ಹಾಕಿದೆ.
ಹಾಗಾದ್ರೆ ಹೌದು ನಾನು ಏಕಪತ್ನಿವೃತಸ್ಥ ಎಂದು ಎದೆ ಮುಟ್ಟಿ ಹೇಳುವ ಜನಪ್ರತಿನಿಧಿ ಯಾರಿದ್ದಾರೆ ಅನ್ನುವುದು ಜನರ ಪ್ರಶ್ನೆ. ಮತದಾರರು ಅದನ್ನು ನಿರೀಕ್ಷೆ ಮಾಡುತ್ತಿದ್ದಾರೆ ಕೂಡಾ.
ಆದರೆ ಈ ಸವಾಲು ಎಸೆಯುವ ಮುನ್ನ ಸುಧಾಕರ್ “ಹೌದು ನಾನು ಏಕಪತ್ನಿವೃತಸ್ಥ” ಎಂದು ಘೋಷಿಸಬೇಕಾಗಿತ್ತು. ಆಗ ಈ ಸವಾಲಿಗೊಂದು ತೂಕ ಇರೋದು.
Discussion about this post