ನವದೆಹಲಿ : ದೇಶದಲ್ಲಿ ಏರುತ್ತಿರುವ ಇಂಧನ ಬೆಲೆ ಜನ ಸಾಮಾನ್ಯರನ್ನು ಕಂಗಾಲು ಮಾಡಿದೆ. ಕನಿಷ್ಟ ಪಕ್ಷ ಕೊರೋನಾ ಸಂಕಷ್ಟ ಕಾಲದಲ್ಲಾದರೂ ಕರುಣೆ ತೋರಬೇಕಾಗಿರುವ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ.
ಈ ನಡುವೆ ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಸೈಕಲ್ ಪ್ರತಿಭಟನೆ ನಡೆಸಿದರು. ಮಂಗಳವಾರ ಬೆಳಿಗ್ಗೆ ಯುವ ಕಾಂಗ್ರೆಸ್ ಮುಖಂಡರೊಂದಿಗೆ ಸೈಕಲ್ ಮೂಲಕ ಸಂಸತ್ಗೆ ತೆರಳಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿಕೆ ಸುರೇಶ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಯೋಚಿಸುವುದನ್ನೇ ನಿಲ್ಲಿಸಿದೆ. ಬದಲಾಗಿ ಬೆಲೆ ಹೆಚ್ಚಿಸುವ ಮೂಲಕ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಈಗಾಗಲೇ ಪೆಟ್ರೋಲ್ ಬೆಲೆ ಶತಕ ದಾಟಿದೆ. ತಕ್ಷಣ ಬೆಲೆ ಇಳಿಕೆ ಮಾಡಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ ಡಿಕೆ ಸುರೇಶ್, ಇಂಧನ ಬೆಲೆ ಹೆಚ್ಚಳದಿಂದಾಗಿ ಜನ ದುಬಾರಿ ಮೊತ್ತದ ವಾಹನ ಮೂಲೆಯಲ್ಲಿರಿಸಿ, ಕೆಲಸ, ಕಾರ್ಯಗಳಿಗೆ ವಾಕಿಂಗ್, ಸೈಕಲ್ ಅವಲಂಭಿಸಿದ್ದಾರೆ ಎಂದರು.
Discussion about this post