ಚಿತ್ರದುರ್ಗ : ಇಂಧನ ದರ ಏರಿಕೆ ವಿಚಾರದಲ್ಲಿ ಆಗ್ರೆಸಿವ್ ಆಗಿ ಪ್ರತಿಭಟನೆ ನಡೆಸುತ್ತಿರುವ ಡಿಕೆಶಿ, ಭವಿಷ್ಯದ ಪಟ್ಟಕ್ಕಾಗಿ ಗಟ್ಟಿ ಅಡಿಪಾಯ ರೆಡಿ ಮಾಡುತ್ತಿದ್ದಾರೆ.
ಈಗಾಗಲೇ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಗಳು ಬೇರೆ ಬೇರೆಯಾಗಿ ಪ್ರತಿಭಟನೆ ನಡೆಸಬೇಕು ಎಂದು ಸೂಚನೆ ಕೊಟ್ಟಿರುವ ಡಿಕೆಶಿ ನಿನ್ನೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಸೂಚಿಸಿದ್ದರು.
ಇಂದು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ನಾಳೆ ಹೋಬಳಿ ಮಟ್ಟದಲ್ಲಿ ಹೀಗೆ ಮತದಾರರನ್ನು ಹೇಗೆ ತಲುಪಬೇಕು ಅನ್ನುವ ಕುರಿತಂತೆ ನೀಲನಕ್ಷೆಯನ್ನು ರೆಡಿ ಮಾಡಿಕೊಂಡಿದ್ದಾರೆ. ಕೇವಲ ಆದೇಶ ಕೊಟ್ಟಿರುವುದು ಮಾತ್ರವಲ್ಲದೆ, ತಾವು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇಂದು ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ತಾವು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಮಾತನಾಡಿದ ಕಾರ್ಯಕರ್ತರ ಮೇಲೆ ಗರಂ ಆಗಿದ್ದಾರೆ.
ತಮ್ಮ ಭಾಷಣದ ನಡುವೆ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದು ಡಿಕೆಶಿಗೆ ಕಿರಿ ಕಿರಿ ಉಂಟು ಮಾಡಿದೆ. ಹೀಗಾಗಿ ಸಿಟ್ಟುಗೊಂಡ ಡಿಕೆಶಿ ನಾನು ಕತ್ತೆ ಕಾಯಲು ಇಲ್ಲಿಗೆ ಬಂದಿಲ್ಲ. ಹೀಗೆ ಮಧ್ಯ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ. ಮೊದಲು ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆ ಸೂಚನೆ ನೀಡಿದರು.
Discussion about this post