ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ನಾಳೆಯಿಂದ ಮತ್ತೆ ನಾಲ್ಕು ದಿನಗಳ ಕಾಲ ಇಡಿ ಅಧಿಕಾರಿಗಳು ಡ್ರಿಲ್ ಮಾಡಲಿದ್ದಾರೆ.
ಅತ್ತ ಡಿಕೆಶಿ ಪರ ವಕೀಲರು ಜಾಮೀನು ಕೊಡಿ ಅಂದ್ರೆ, ಇಡಿ ವಕೀಲರು ಜಪ್ಪಯ್ಯ ಅಂದರೂ ಜಾಮೀನು ಕೊಡಬೇಡಿ, ಅವರನ್ನು ಇಡಿ ವಶಕ್ಕೆ ಕೊಡಿ ಎಂದು ವಾದ ಮಂಡಿಸಿದ್ದರು. 5 ದಿನಗಳ ಕಾಲ ಇಡಿ ವಶಕ್ಕೆ ಕೇಳಿದ ವಕೀಲರ ವಾದ ಮನ್ನಿಸಿರುವ ನ್ಯಾಯಾಧೀಶರು ನಾಲ್ಕು ದಿನಗಳ ಕಾಲ ಇಡಿ ಕಸ್ಟಡಿ ವಿಧಿಸಿದ್ದಾರೆ.
ಸೆಪ್ಟೆಂಬರ್ 17ರವರೆಗೆ ಡಿಕೆಶಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಇಡಿ ಕಸ್ಟಡಿ ವಿಧಿಸಿದೆ. ವಿಚಾರಣೆಗೂ ಮುನ್ನ ಡಿಕೆಶಿ ಆರೋಗ್ಯ ತಪಾಸಣೆ ನಡೆಸುವಂತೆ ತನಿಖಾಧಿಕಾರಿಗೆ ಇದೇ ವೇಳೆ ನ್ಯಾಯಾಧೀಶ ಕುಹರ್ ಸೂಚಿಸಿದ್ದಾರೆ. ಜೊತೆಗೆ ಡಿಕೆಶಿ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸೋಮವಾರ ತಕಾರರುಗಳಿದ್ದರೆ ಸಲ್ಲಿಸುವಂತೆ ಆದೇಶಿದ್ದಾರೆ.
ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿದೆ. ಜೊತೆಗೆ ನ್ಯಾಯಾಲಯದಲ್ಲಿ ಇಡಿ ಪರ ವಕೀಲರು ಪ್ರಸ್ತಾಪಿಸಿದ ಹೊಸ ವಿಚಾರಗಳ ಕುರಿತಂತೆಯೂ ತನಿಖೆ ನಡೆಸುವ ಸಾಧ್ಯತೆಗಳಿದೆ.
Discussion about this post