ಅತ್ತ ಹಣಕಾಸು ಅವ್ಯವಹಾರ ವಿಚಾರದಲ್ಲಿ ಡಿಕೆ ಶಿವಕುಮಾರ್ ಬಂಧನ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಂಧನ ಕುರಿತಂತೆ ಒಮ್ಮತದ ಹೇಳಿಕೆಯನ್ನು ಕೊಡುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಡಾ. ಅಶ್ವಥ್ ನಾರಾಯಣ್ ಡಿಕೆಶಿ ವಿರುದ್ಧ ಕಿಡಿ ಕಾರಿದ್ದಾರೆ. ಬಿತ್ತಿರುವುದನ್ನೇ ಕೊಯ್ಲು ಮಾಡುವುದು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ನವ ಭಾರತದಲ್ಲಿ ಭ್ರಷ್ಟಚಾರಿಗಳಿಗೆ ಜಾಗವಿಲ್ಲ ಅನ್ನುವ ಮೂಲಕ ಎದೆಗಾರಿಕೆ ತೋರಿದ್ದಾರೆ.
ಆದರೆ ಸಿಎಂ ಯಡಿಯೂರಪ್ಪ ಅವರು ಮಾತ್ರ ಡಿಕೆಶಿ ವಿಚಾರದಲ್ಲಿ ಸಿಕ್ಕಾಪಟ್ಟೆ ಸಾಫ್ಟ್ ಹೇಳಿಕೆ ಕೊಟ್ಟಿದ್ದಾರೆ. ಡಿಕೆಶಿಯವರು ಇದರಿಂದ ಹೊರಬರಲಿ, ಅವರು ಹೊರ ಬಂದರೆ ನಾನೇ ಮೊದಲು ಸಂತೋಷ ಪಡುತ್ತೇನೆ ಅನ್ನುವ ಮೂಲಕ ಮೃದು ಧೋರಣೆ ತೋರಿದ್ದಾರೆ.
ಈ ಹಿಂದೆ ಡಿಕೆಶಿ ಮೇಲೆ ಐಟಿ ದಾಳಿಯಾದ ಸಂದರ್ಭದಲ್ಲೂ ರಾಜ್ಯ ಬಿಜೆಪಿ ಪ್ರತಿಭಟನೆಗೆ ಮುಂದಾಗಿರಲಿಲ್ಲ. ಡಿಕೆಶಿ ಆರೋಪ ಮುಕ್ತರಾಗುವ ತನಕ ರಾಜೀನಾಮೆ ಕೊಡಬೇಕು ಎಂದು ಹೇಳಿರಲಿಲ್ಲ. ಯಾವಾಗ ಕೇಂದ್ರದ ನಾಯಕರು ಬಿಸಿ ಮುಟ್ಟಿಸಿದರೋ, ಬಳಿಕ ಡಿಕೆಶಿ ವಿರುದ್ಧ ಪ್ರತಿಭಟನೆ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.
Discussion about this post