ಬೆಂಗಳೂರು : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಖಾತೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಾಕ್ ಕೊಟ್ಟಿದ್ದಾರೆ. ಖಾತೆಗಳನ್ನು ಪಡೆಯುವ ಮುನ್ನವೇ ಜಿಲ್ಲಾ ಉಸ್ತುವಾರಿ ಖಾತೆಗಳನ್ನು ಕೊಟ್ಟಿರುವ ಸಿಎಂ, ತಕ್ಷಣ ಸೂಚಿಸಿದ ಜಿಲ್ಲೆಗಳಿಗೆ ತೆರಳಿ ನೆರೆ ಹಾಗೂ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.
ಈ ಮೂಲ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅನ್ನುವ ಸಂದೇಶವನ್ನು ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ. ಹೀಗಾಗಿ ಇದೀಗ ಆ ಖಾತೆ ಈ ಖಾತೆ ಎಂದು ನಿರೀಕ್ಷೆಯಲ್ಲಿದ್ದವರು ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಪ್ರಾರಂಭಿಸಬೇಕಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಪರಿಶೀಲಿಸಲು ಸಚಿವರುಗಳಿಗೆ ಜವಾಬ್ದಾರಿ ನೀಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಯಾವ ಜಿಲ್ಲೆಗೆ ಯಾರು?
• ಗೋವಿಂದ ಕಾರಜೋಳ – ಬೆಳಗಾವಿ
• ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ
• ಆರ್ ಅಶೋಕ್ – ಬೆಂಗಳೂರು ನಗರ
• ಬಿ ಶ್ರೀ ರಾಮುಲು- ಚಿತ್ರದುರ್ಗ
• ವಿ. ಸೋಮಣ್ಣ – ರಾಯಚೂರು
• ಉಮೇಶ್ ಕತ್ತಿ – ಬಾಗಲಕೋಟೆ
• ಎಸ್. ಅಂಗಾರ – ದಕ್ಷಿಣ ಕನ್ನಡ
• ಜೆ.ಸಿ ಮಾಧುಸ್ವಾಮಿ – ತುಮಕೂರು
• ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
• ಸಿ. ಎನ್. ಅಶ್ವತ್ ನಾರಾಯಣ – ರಾಮನಗರ
• ಸಿ.ಸಿ ಪಾಟೀಲ್ – ಗದಗ
• ಆನಂದ್ ಸಿಂಗ್ – ಬಳ್ಳಾರಿ ಮತ್ತು ವಿಜಯನಗರ
• ಕೋಟಾ ಶ್ರೀನಿವಾಸ್ ಪೂಜಾರಿ- ಕೊಡಗು
• ಪ್ರಭು ಚೌವ್ಹಾಣ್ – ಬೀದರ್
• ಮುರುಗೇಶ್ ನಿರಾಣಿ – ಕಲಬುರಗಿ
• ಅರಬೈಲು ಶಿವರಾಮ್ ಹೆಬ್ಬಾರ್ – ಉತ್ತರ ಕನ್ನಡ
• ಎಸ್. ಟಿ. ಸೋಮಶೇಖರ್- ಮೈಸೂರು, ಚಾಮರಾಜನಗರ
• ಬಿ.ಸಿ. ಪಾಟೀಲ್ – ಹಾವೇರಿ
• ಭೈರತಿ ಬಸವರಾಜ – ದಾವಣಗೆರೆ
• ಡಾ. ಕೆ. ಸುಧಾಕರ್ – ಚಿಕ್ಕಬಳ್ಳಾಪುರ
• ಕೆ. ಗೋಪಾಲಯ್ಯ – ಹಾಸನ
• ಶಶಿಕಲಾ ಜೊಲ್ಲೆ – ವಿಜಯಪುರ
• ಎಂ.ಟಿ.ಬಿ. ನಾಗರಾಜ್ – ಬೆಂಗಳೂರು ಗ್ರಾಮಾಂತರ
• ಕೆ. ಸಿ. ನಾರಾಯಣಗೌಡ – ಮಂಡ್ಯ
• ಬಿ.ಸಿ. ನಾಗೇಶ್ – ಯಾದಗಿರಿ
• ವಿ. ಸುನೀಲ್ ಕುಮಾರ್ – ಉಡುಪಿ
• ಹಾಲಪ್ಪ ಆಚಾರ್ – ಕೊಪ್ಪಳ
• ಶಂಕರ ಪಾಟೀಲ್ ಮುನೇನಕೊಪ್ಪ – ಧಾರವಾಡ
• ಮುನಿರತ್ನ- ಕೋಲಾರ ಜಿಲ್ಲೆಗಳಿಗೆ ಜವಾಬ್ದಾರಿ ವಹಿಸಲಾಗಿದೆ.
Discussion about this post