48 ದಿನಗಳಿಂದ ತಿಹಾರ್ ಜೈಲಿನಲ್ಲಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಡಿಕೆಶಿ ಜಾಮೀನು ಮಂಜೂರು ಮಾಡಿದ್ದಾರೆ.
ಅಮೇಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ ನಲ್ಲಿ ಏನೆಲ್ಲಾ ಆಫರ್ ಗಳಿದೆ ಗೊತ್ತಾ…?
25 ಲಕ್ಷ ಬಾಂಡ್, ಪಾಸ್ ಪೋರ್ಟ್ ಸರೆಂಡರ್, ವಿಚಾರಣೆಗೆ ಅಗತ್ಯವಿದೆ ಅಂದಾಗ ಹಾಜರಾಗಬೇಕು ಅನ್ನುವ ಷರತ್ತುಗಳನ್ನು ವಿಧಿಸಿರುವ ನ್ಯಾಯಾಲಯದ ಜಾಮೀನು ಮಂಜೂರು ಮಾಡಿದೆ.
ಅತ್ತ ಜಾಮೀನು ಮಂಜೂರಾಗುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ವಕೀಲರನ್ನು ತಬ್ಬಿಕೊಂಡ ಡಿಕೆಶಿ ಸಹೋದರ ಡಿಕೆ ಸುರೇಶ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಜಾಮೀನು ಮಂಜೂರುಗೊಂಡರೂ ಕೂಡಾ ಡಿಕೆಶಿ ಇಂದು ಬಿಡುಗಡೆಗೊಳ್ಳುವುದು ಅನುಮಾನ. ನ್ಯಾಯಾಲಯದ ಆದೇಶ ಜೈಲಿಗೆ ತಲುಪಬೇಕು ಅಲ್ಲಿಗೆ ಸಾಕಷ್ಟು ಪ್ರಕ್ರಿಯೆಗಳು ಮುಕ್ತಾಯಗೊಳ್ಳಬೇಕಾಗಿದೆ. ಹೀಗಾಗಿ ಅದು ಇಂದು ಮುಕ್ತಾಯಗೊಳ್ಳುವುದು ಕಷ್ಟ. ಹೀಗಾಗಿ ಡಿಕೆಶಿ ನಾಳೆ ಬಿಡುಗಡೆಯಾಗುವ ಸಾಧ್ಯತೆಗಳಿದೆ.
Discussion about this post