ರಶ್ಮಿಕಾ ಮಂದಣ್ಣ ಅವರ Deep fake video ಸಿಕ್ಕಾಪಟ್ಟೆ ವೈರಲ್ ಆಗಿದೆ
ತಂತ್ರಜ್ಞಾನಗಳು ಮುಂದುವರಿದಷ್ಟು, ಸಂಶೋಧನೆಗಳು ಹೆಚ್ಚಿದಷ್ಟು ಅನುಕೂಲಗಳು ಜಾಸ್ತಿ ಅಂದುಕೊಂಡ್ರೆ, ಅಪಾಯಗಳು ಕೂಡಾ ಅಷ್ಟೇ ಹೆಚ್ಚಾಗುತ್ತಿದೆ. ದುಡ್ಡು ಡ್ರಾ ಮಾಡಲು ಬ್ಯಾಂಕ್ ಗೆ ಹೋಗಿ ಕ್ಯೂ ನಿಲ್ಲೋದನ್ನು ತಪ್ಪಿಸಿದ ಎಟಿಎಂ ಸಿಸ್ಟಮ್ ಕೂಡಾ ಸೇಫ್ ಅನ್ನಿಸಲಿಲ್ಲ. ಎಟಿಎಂ ನಂತ್ರ ಬಂದ ಆನ್ ಲೈನ್ ಹಣ ವರ್ಗಾವಣೆ ವಿಧಾನ ಕೂಡಾ ಇಂದಿಗೂ 100% ಸೇಫ್ ಆಗಿಲ್ಲ. ಈ ಸಾಲಿಗೆ ಮತ್ತೊಂದು ಸೇರ್ಪಡೆ Deep fake video APP. ರಶ್ಮಿಕಾ ಮಂದಣ್ಣ ಅವರು ಇದೇ ಕಾರಣಕ್ಕೆ Viral ಆಗಿದ್ದಾರೆ.
ಸೆಲೆಬ್ರೆಟಿಗಳಂತೆ ಕಾಣಿಸಿಕೊಳ್ಳುವ ಹುಚ್ಚಿರುವ ಮಂದಿಗಾಗಿ Deep fake video APP ಗಳು ಹುಟ್ಟಿಕೊಂಡಿತು. ಆದರೆ ಕಾಲ ಕಳೆದಂತೆ ಅದರ ದುರ್ಬಳಕೆ ಪ್ರಾರಂಭಗೊಂಡಿತು. ಯಾರದ್ದೋ ಬಾಡಿಗೆ, ಇನ್ಯಾರದ್ದೋ ಮುಖ ಅಂಟಿಸುವ ಕೆಟ್ಟ ಚಾಳಿ ಪ್ರಾರಂಭವಾಯ್ತು. ಅದರಲ್ಲೂ ಮಹಿಳೆಯರ ಪಾಲಿಗೆ ಈ APP ಗಳು ಭಯೋತ್ಪಾದಕರಾಗಿದ್ದು ಸುಳ್ಳಲ್ಲ.
Read this : ಇಸ್ರೋ ಅಧ್ಯಕ್ಷರ ಆತ್ಮಚರಿತ್ರೆಗೆ ಕೇಂದ್ರ ಸರ್ಕಾರದಿಂದ ತಡೆ
ಅದೇ ರೀತಿ ಇದೀಗ ಝಾರ ಪಟೇಲ್ (zara patel ) ಅನ್ನುವವರ ವಿಡಿಯೋಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿದೆ. ತನ್ನದೇ ಆದ ಕಾರಣಕ್ಕೆ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಂಭಾವಿತರು ಅನ್ನಿಸಿಕೊಂಡವರಿಗೆ ಮುಜುಗರ ತರಿಸಿದ್ದು ಸುಳ್ಳಲ್ಲ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ರಶ್ಮಿಕಾ ಅವರಿಗೆ ಮಾತ್ರವಲ್ಲ ಎಲ್ಲಾ ಹೆಣ್ಣುಮಕ್ಕಳಲ್ಲೂ ಆತಂಕ ಸೃಷ್ಟಿಸಿದೆ.
ಇನ್ನು ರಶ್ಮಿಕಾ ಮಂದಣ್ಣ ಅವರು ಈ ವಿಡಿಯೋ ಬಗ್ಗೆ ಮೌನ ಮುರಿದಿದ್ದು. ಇದು ‘ಅತ್ಯಂತ ಭಯಾನಕ’ ಅಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತಿದೆ. ಆನ್ಲೈನ್ನಲ್ಲಿ ಹರಡಿರುವ ನನ್ನ ಡೀಪ್ ಫೇಕ್ ವೀಡಿಯೋ ಬಗ್ಗೆ ಮಾತನಾಡಲೇಬೇಕಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಅನ್ನುವುದು ಗೊತ್ತಾಗುತ್ತಿದೆ.
“ನನ್ನ ರಕ್ಷಣೆ ಮತ್ತು ಬೆಂಬಲಕ್ಕೆ ನಿಂತ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ಇಂದು ಒಬ್ಬ ಮಹಿಳೆಯಾಗಿ ಮತ್ತು ನಟಿಯಾಗಿ ನಾನು ಕೃತಜ್ಞಳಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಹೀಗಾಗಿದ್ದರೆ ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ನನಗೆ ನಿಜವಾಗಿಯೂ ಊಹಿಸೋದಿಕ್ಕೆ ಸಾಧ್ಯವಿಲ್ಲ” ಎಂದು ರಶ್ಮಿಕಾ ಆತಂಕ ವ್ಯಕ್ತಪಡಿಸಿದ್ದಾರೆ.
I feel really hurt to share this and have to talk about the deepfake video of me being spread online.
Something like this is honestly, extremely scary not only for me, but also for each one of us who today is vulnerable to so much harm because of how technology is being misused.…
— Rashmika Mandanna (@iamRashmika) November 6, 2023
ಇನ್ನು ಈ ಬೆಳವಣಿಗೆ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೂಡಾ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ.
PM @narendramodi ji's Govt is committed to ensuring Safety and Trust of all DigitalNagriks using Internet
— Rajeev Chandrasekhar 🇮🇳 (@Rajeev_GoI) November 6, 2023
Under the IT rules notified in April, 2023 – it is a legal obligation for platforms to
➡️ensure no misinformation is posted by any user AND
➡️ensure that when reported by… https://t.co/IlLlKEOjtd
Discussion about this post