ದಾವಣಗೆರೆ : ರೇಣುಕಾಚಾರ್ಯ…ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ಅವರು ಮಾಡಿದ ಕೆಲಸವನ್ನು ನಾಡು ಮೆಚ್ಚಿತ್ತು. ಅವರ ಮೇಲಿದ್ದ ಎಲ್ಲಾ ಆರೋಪಗಳನ್ನು ಈ ಕೆಲಸ ತೊಳೆದು ಹಾಕಿತ್ತು ಅಂದ್ರೆ ತಪ್ಪಲ್ಲ.
ಹಾಗಂತ ಅವರು ತೆಪ್ಪ ಓಡಿಸಿದ್ದು, ಯಡಿಯೂರಪ್ಪ ಪರ ಬ್ಯಾಟ್ ಬೀಸುವ ಭರದಲ್ಲಿ ಬಳಸಿದ ಭಾಷೆಯನ್ನು ಮರೆಯಲು ಸಾಧ್ಯವಿಲ್ಲ. ಅಷ್ಟೇ ಯಾಕೆ ಹಿಂದೊಮ್ಮೆ ಹೋರಿಯಿಂದ ಶಾಸಕರು ಹಾಯಿಸಿಕೊಂಡಿದ್ದರು ಕೂಡಾ.
ಇದೀಗ ದಾವಣಗೆರೆಯಲ್ಲಿ ಹೋರಿಯ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಶಾಸಕರು ಸುದ್ದಿಯಲ್ಲಿದ್ದಾರೆ. ಹೋರಿಯ ಮಾಲೀಕನ ಮನವಿ ಮೇರೆಗೆ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ರೇಣುಕಾಚಾರ್ಯ ಕೇಕ್ ಕತ್ತರಿಸಿ ಹೋರಿಯ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಅಂದ ಹಾಗೇ ಈ ಘಟನೆ ನ್ಯಾಮತಿ ತಾಲೂಕಿನ ಬೆಳಗುತ್ತಿಯಲ್ಲಿ ನಡೆದಿದೆ.
ತೀರ್ಥಗಿರಿ ಡಾನ್ ಎಂಬ ಹೋರಿಯ ಮಾಲೀಕ ಮಂಜುನಾಥ್, ತಾವು ಸಾಕಿದ್ದ ಹೋರಿಯ ಹುಟ್ಟುಹಬ್ಬ ಆಯೋಜಿಸಿದ್ದರು. ಇದಕ್ಕೆ ಶಾಸಕರನ್ನೂ ಆಹ್ವಾನಿಸಲಾಗಿತ್ತು. ತಮ್ಮ ಅಭಿಮಾನಿಗಳನ್ನು ಎಂದಿಗೂ ನಿರಾಶೆ ಮಾಡದ ಶಾಸಕರು ಹೋರಿಯ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.
ಈ ಹೋರಿ ಕಳೆದ 14 ವರ್ಷಗಳಿಂದ ಕೊಬ್ಬರಿ ಕೀಳಲು ಯಾರ ಕೈಗೂ ಸಿಗದೆ, ಮಾಲೀಕನಿಗೆ ಸಾಕಷ್ಟು ಬಹುಮಾನ ತಂದುಕೊಟ್ಟಿದೆ. ಹೀಗಾಗಿಯೇ ಇದನ್ನು ತೀರ್ಥಗಿರಿ ಡಾನ್ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ : ಅಂದು ಹೋರಿ ದಾಳಿ…ಇಂದು ಕೋತಿ ದಾಳಿ….. ಶಾಸಕ ರೇಣುಕಾಚಾರ್ಯರಿಗೆ ಕಾಡುತ್ತಿರುವುದು ಅದ್ಯಾವ ಕಂಟಕ
ಇದನ್ನೂ ಓದಿ : ಶಾಸಕ ರೇಣುಕಾಚಾರ್ಯಗೆ ತಿವಿದ ಹೋರಿ…
Discussion about this post