ಮತ್ತೆ ಮಂಡ್ಯದಲ್ಲಿ ಎಲ್ಲಾ ನಿಮ್ಮವರಿದ್ರೂ ಏನಾಯ್ತು ರೇವಣ್ಣ…?
SSLC ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಈ ಬಾರಿ ಐದನೇ ಸ್ಥಾನ ಪಡೆದುಕೊಳ್ಳಲು ಕಾರಮ ಏನು ಗೊತ್ತಾ. ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹೋದರ ಹೆಚ್.ಡಿ. ರೇವಣ್ಣ ಪ್ರಕಾರ ಕರಾವಳಿಯವರು ಜೆಡಿಎಸ್ಗೆ ಮತ ಹಾಕಿಲಿಲ್ಲ. ಅದಕ್ಕೆ ಐದನೇ ಸ್ಥಾನ ದೊರೆತಿದೆಯಂತೆ.
ಚುನಾವಣೆಯಲ್ಲಿ ದಕ್ಷಿಣ ಕನ್ನಡದವರು ಬಿಜೆಪಿಗೆ ಮತ ಹಾಕಿದ್ದಾರೆ. ಜೆಡಿಎಸ್ಗೆ
ಮತ ಹಾಕಿಲ್ಲ. ಹೀಗಾಗಿ ಅದು ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ ಎಂದು ರೇವಣ್ಣ ಹೇಳಿದ್ದಾರೆ.
ದಕ್ಷಿಣ ಕನ್ನಡದವರು
ಜೆಡಿಎಸ್ಗೆ ಮತ ಹಾಕಿದ್ದರೆ ಫಲಿತಾಂಶದಲ್ಲಿ ನಂಬರ್ ಒನ್ ಸ್ಥಾನ ಪಡೆಯುತ್ತಿತ್ತು ಎಂದು
ಸ್ಪಷ್ಟಪಡಿಸಿದ್ದಾರೆ ರೇವಣ್ಣ.
ಮಂಡ್ಯದ ಮತದಾರರು ಏಳು ಶಾಸಕರನ್ನು ಗೆಲ್ಲಿಸಿದ್ದಾರೆ, ಅದ್ಯಾಕೆ ಫಲಿತಾಂಶದಲ್ಲಿ ನಂಬರ್ 1 ಸ್ಥಾನ ಪಡೆಯಲಿಲ್ಲ ರೇವಣ್ಣ ಅವರೇ ಅನ್ನುವುದು ನಮ್ಮ ಪ್ರಶ್ನೆ.
ಏನೇ ಇರಲಿ, ಕರಾವಳಿ ಬಗ್ಗೆ ದಳಪತಿಗಳಿಗೆ ಅದೇನೋ ಆಕ್ರೋಶವಿದೆ. ಹಿಂದೊಮ್ಮೆ ಕುಮಾರಸ್ವಾಮಿ ಕರಾವಳಿ ಬಗ್ಗೆ ಮಾತನಾಡಿದ್ದರು. ಇದೀಗ ಸಹೋದರನ ಸರದಿ.
Discussion about this post