ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಮೂಲದ ಓರ್ವ ಸೇರಿದಂತೆ ಮೂವರು ಸಿಆರ್ಪಿಎಫ್ನ ಯೋಧರು ಹುತಾತ್ಮರಾಗಿದ್ದಾರೆ.
ಕಲಬುರ್ಗಿ ಮೂಲದವರಾದ ಸಹಾಯಕ ಸಬ್ ಇನ್ಸ್ಪೆಕ್ಟರ್ ಮಹಾದೇವ್ ಪಿ(50) ಹುತಾತ್ಮರಾಗಿದ್ದು ಅವರು ನಕ್ಸಲ್ ಪ್ರಾಬಲ್ಯದಲ್ಲಿನ ಪ್ರದೇಶದಲ್ಲಿ ಕಾರ್ಯಾಚರಣೆ ತಂಡದ ಭಾಗವಾಗಿದ್ದರು. ಮಹದೇವ್ ತಮ್ಮ ಮಗಳ ಸೀಮಂತಕ್ಕಾಗಿ ಇನ್ನೆರಡು ದಿನಗಳಲ್ಲಿ ಊರಿಗೆ ಆಗಮಿಸಬೇಕಾಗಿತ್ತು.ಆದರೆ ವಿಧಿಯಾಟವೇ ಬೇರಿತ್ತು.
ಯೋಧರ ಮೃತದೇಹವನ್ನು ತವರೂರಾದ ಮರಗುತ್ತಿಗೆ ಶನಿವಾರ ಹೈದರಾಬಾದ್ನಿಂದ ರಸ್ತೆ ಮೂಲಕ ತರಲಾಗಿದೆ. ಮಹಾದೇವ್ 29 ವರ್ಷದಿಂದ ಸಿಆರ್ಪಿಎಫ್ನ ಜೊತೆ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ, ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.
Discussion about this post