ವಾರಾಂತ್ಯದ ಮೋಜು ಮಸ್ತಿಗಾಗಿ ತೆರಳುವ ಮುನ್ನ ಎಚ್ಚರಿಕೆ ವಹಿಸಿ ( Crime )
ಬೆಂಗಳೂರು : ಮದ್ಯದ ಅಮಲಿನಲ್ಲಿ ಅಪಾರ್ಟ್ ಮೆಂಟ್ ನ 10 ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.( Crime )
ಶನಿವಾರದ ಸೂರ್ಯೋದಕ್ಕೆ ಇನ್ನೇನು ಕೆಲವು ಗಂಟೆಗಳಿದೆ ಅನ್ನುವಾಗ ಈ ದುರ್ಘಟನೆ ಸಂಭವಿಸಿದೆ. ಗ್ರೀನ್ ಗ್ಲೆನ್ lay out ನ ಶೋಭಾ ದಾಲಿಯಾ ಅಪಾರ್ಟ್ ಮೆಂಟ್ ನಲ್ಲಿ ಈ ದುರ್ಘಟನೆ ನಡೆದಿದ್ದು, ಮೃತನನ್ನು ತ್ರಿದೀಪ್ ಕನ್ಹಾರ್ (28 ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತ್ರಿದೀಪ್ ಶುಕ್ರವಾರ ರಾತ್ರಿ ತನ್ನ ಸ್ನೇಹಿತರ ಮನೆಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾನೆ. ಶನಿವಾರ ಮುಂಜಾನೆ ತನಕವೂ ಪಾರ್ಟಿ ಮುಂದುವರಿದಿತ್ತು. ಶನಿವಾರ ನಸುಕಿನ ಮೂರು ಗಂಟೆಗೆ ಪಾರ್ಟಿ ಮುಗಿಸಿ ಅಪಾರ್ಟ್ ಮೆಂಟ್ ಗೆ ಮರಳಿದ್ದಾರೆ. ಈ ವೇಳೆ ಅದೇ ಆಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದ ಮತ್ತಿಬ್ಬರು ಗೆಳೆಯರು ಪಾರ್ಟಿ ಮಾಡುತ್ತಿರುವುದು ಗೊತ್ತಾಗಿದೆ. ಹೀಗಾಗಿ ಅವರೊಂದಿಗೆ ಸೇರಿ ಪಾರ್ಟಿ ಮಾಡಲು ತ್ರಿದೀಪ್ ಮುಂದಾಗಿದ್ದಾರೆ.
ಇದಕ್ಕಾಗಿ ಮದ್ಯ ತರಲು 10ನೇ ಮಹಡಿಯ ಸಜ್ಜಾದಲ್ಲಿ ಇಟ್ಟಿದ್ದ ಮದ್ಯ ತೆಗೆಯಲು ತೆರಳಿದ್ದಾರೆ. ಮೊದಲೇ ಎಣ್ಣೆ ಏಟು, 10ಮೇ ಮಹಡಿಯಿಂದ ಆಯಾ ತಪ್ಪಿ ಬಿದ್ದ ತ್ರಿದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Discussion about this post