ಪಶ್ಚಿಮ ಬಂಗಾಳದಲ್ಲಿ 28 ವರ್ಷಗಳ ಕಾಲ ಆಡಳಿತ ನಡೆಸಿದ್ದ ಸಿಪಿಐ ಮತ್ತು ಸಿಪಿಎಂ ಪಕ್ಷಗಳ ಬೊಕ್ಕಸ ಬರಿದಾಗಿದ್ದು ಚುನಾವಣೆ ಎದುರಿಸಲು ಬೇರೆ ಪಕ್ಷಗಳಿಂದ ದೇಣಿಗೆ ಪಡೆಯಬೇಕಾದ ಪರಿಸ್ಥಿತಿಗೆ ತಲುಪಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಎದುರಿಸಲು ಡಿಎಂಕೆ ಪಕ್ಷದಿಂದ ಸಿಪಿಐ 15 ಕೋಟಿ ಮತ್ತು ಸಿಪಿಐಎಂ 10 ಕೋಟಿ ದೇಣಿಗೆಯನ್ನು ಪಡೆದುಕೊಂಡಿತ್ತು.ಇದೇ ಚುನಾವಣೆಗೆ ಡಿಎಂಕೆ 79 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು.
ಚುನಾವಣಾ ಆಯೋಗಕ್ಕೆ ಡಿಎಂಕೆ ಸಲ್ಲಿಸಿದ್ದ ವಿವರಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ, ಸಿಪಿಎಂ ಹಾಗೂ ಕೊಂಗನಾಡು ಡೆಮಾಕ್ರಾಟಿಕ್ ಪಕ್ಷಗಳೊಂದಿಗೆ ಡಿಎಂಕೆ ಹೊಂದಾಣಿಕೆ ಮಾಡಿಕೊಂಡಿತ್ತು.
Discussion about this post