ಕೊರೋನಾ ಸೋಂಕಿನ ವಿರುದ್ಧ ಸಮರ ಮುಂದುವರಿದಿರುವಂತೆ ಭಾರತದಲ್ಲಿ ತಯಾರಾಗುತ್ತಿರುವ ಲಸಿಕೆ ಬಗ್ಗೆ ಹೊಸ ವಿಶ್ವಾಸ ಮೂಡಲಾರಂಭಿಸಿದೆ. ಲಸಿಕೆಯೇನೋ ತಯಾರಿಸಬಹುದು, ಆದರೆ ಅದನ್ನು ದೊಡ್ಡ ಜನ ಸಮುದಾಯಕ್ಕೆ ತಲುಪಿಸುವುದೋ ದೊಡ್ಡ ಸವಾಲಿನ ಕೆಲಸವಾಗಿದೆ.
ಈ ಹಿನ್ನಲೆಯಲ್ಲಿ CO WIN20 ಹೆಸರಿನ APP ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರ ಮೂಲಕ ಲಸಿಕೆ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.
ಹಾಗೇ ನೋಡಿದರೆ ಕೋವಿನ್ 20 APP ಮೊದಲು ಅಭಿವೃದ್ಧಿಯಾಗಿದ್ದು ಕೊರೋನಾ ಸೋಂಕಿತರ ಬಗ್ಗೆ ನಿಗಾ ವಹಿಸಲು ಬಳಿಕ ಅದನ್ನು ಆರೋಗ್ಯ ಸೇತುವಾಗಿ ಮಾರ್ಪಡಿಸಲಾಗಿತ್ತು.
ಆರೋಗ್ಯ ಸೇತು ಜಾರಿಗೊಂಡ ಬಳಿಕವೂ ಕೋವಿನ್ APP ಅಭಿವೃದ್ಧಿ ಕಾರ್ಯ ನಿಂತಿರಲಿಲ್ಲ. ಮತ್ತೊಂದು ಉದ್ದೇಶದೊಂದಿಗೆ APP ಇದೀಗ ಬರಲಿದೆ.
ಹೌದು ಕೊರೋನಾ ಲಸಿಕೆಯನ್ನು ಹಂಚಿಕೆ ಮಾಡುವ ಸಲುವಾಗಿ ಈ ಕೋವಿನ್ APP ಅನ್ನು ಬಳಸಲಾಗುತ್ತದೆ.
ಆರೋಗ್ಯ ಸಿಬ್ಬಂದಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ನಾಗರಿಕರು APP ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ಒಂದು ಸಲ ನೋಂದಣಿ ಮಾಡಿಕೊಂಡ ನಂತರ ಲಸಿಕೆ ನಿರ್ವಾಹಕರಿಗೆ ಸಂದೇಶ ಹೋಗುತ್ತದೆ. ಬಳಿಕ ಅವರು ಲಸಿಕೆ ತಯಾರಿಕಾ ಸಂಸ್ಥೆಯನ್ನು ಸಂಪರ್ಕಿಸುತ್ತಾರೆ.
ಬಳಿಕ ಲಸಿಕೆ ನಿರ್ವಾಹಕರು ಫಲಾನುಭವಿಗಳ ಮಾಹಿತಿ ಸಂಗ್ರಹ ಕಾರ್ಯ ಪ್ರಾರಂಭಿಸುತ್ತಾರೆ. ಜೊತೆಗೆ ಲಸಿಕೆ ವಿತರಣೆ ಯಾವ ಹಂತದಲ್ಲಿದೆ ಎಂದು ಅಪ್ ಡೇಟ್ ಮಾಡುತ್ತಾರೆ. ಒಂದು ಸಲ ಲಸಿಕೆ ಸಿದ್ದವಾಗುತ್ತಿದ್ದಂತೆ QR Code ಆಧಾರಿತ ಪ್ರಮಾಣ ಪತ್ರ ಸಿದ್ದವಾಗುತ್ತದೆ. ಅದರಲ್ಲಿ ಫಲಾನುಭವಿಗೆ ಎಷ್ಟು ಡೋಸ್, ಎಷ್ಟು ಬಾರಿ ನೀಡಲಾಗಿದೆ ಅನ್ನುವುದು ದಾಖಲಾಗುತ್ತದೆ.
ಜೊತೆಗೆ ಎಷ್ಟು ಮಂದಿ ಲಸಿಕೆ ಸ್ವೀಕರಿಸಿದ್ದಾರೆ, ಎಷ್ಟು ಮಂದಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ಸ್ವೀಕರಿಸಿಲ್ಲ ಅನ್ನುವ ಮಾಹಿತಿಗಳು ಕೂಡಾ APP ನಲ್ಲಿ ದಾಖಲಾಗುತ್ತದೆ.
ಕೋವಿನ್ ವಿಶೇಷತೆ
ಕೋವಿನ್ APP ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಈ APP ಲಸಿಕೆ ಎಜೆನ್ಸಿ , ಲಸಿಕೆ ತಯಾರಿಕಾ ಸಂಸ್ಥೆಗಳಿಗೆ ನಿಗಾ ವಹಿಸಲು ಅನುಕೂಲವಾಗಿರಲಿದೆ. ಮಾತ್ರವಲ್ಲದೆ ದೇಶದ ಜನರಿಗೆ ಆನ್ ಲೈನ್ ಮೂಲಕವೇ ಲಸಿಕೆಗೆ ನೋಂದಾಯಿಸಿಕೊಳ್ಳಲುಅನುಕೂಲವಾಗಲಿದೆ.
ಈ APP ನಲ್ಲಿ ನಿರ್ವಾಹಕರುಸ ನೋಂದಣಿ, ಲಸಿಕೆ ವಿತರಣೆ, ಫಲಾನುಭವಿಗಳ ಪ್ರಮಾಣ ಪತ್ರ ಎಂಬ 5 ಸೆಕ್ಷನ್ ಗಳಿದ್ದು ಲಸಿಕೆ ವಿತರಣೆ ಯಾವ ಹಂತದಲ್ಲಿದೆ ಅನ್ನುವುದನ್ನು ಸ್ಥಳೀಯಾಡಳಿತ ಒದಗಿಸಲಿದೆ.
ಹೆಸರು ನೋಂದಾಯಿಸಿಕೊಳ್ಳುವುದು ಹೇಗೆ..
ಪ್ರಸ್ತುತ ಕೋವಿನ್ APP ಅಭಿವೃದ್ಧಿ ಹಂತದಲ್ಲಿದೆ. ಬಹುತೇಕ APP ಸಿದ್ದಗೊಂಡಿದ್ದು ಆಂತರಿಕವಾಗಿ ಪರೀಕ್ಷೆಯನ್ನು ಎದುರಿಸುತ್ತಿದೆ. ಒಂದು ಸಲ APP ರೆಡಿಯಾಗುತ್ತಿದ್ದಂತೆ ಗೂಗಲ್ ಪ್ಲೇ ಸ್ಟೋರ್ ಹಾಗೂ Apple store ನಲ್ಲೂ ಲಭ್ಯವಾಗಲಿದೆ.
Discussion about this post