ಚೈನಾ ವೈರಸ್ ಸೋಲಿಸುವ ಸಲುವಾಗಿ ಇದೀಗ ಭಾರತದ ವಿಜ್ಞಾನಿಗಳು ಸಂಜೀವಿನಿಯೊಂದನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಕೊರೋನಾ ವೈರಸ್ ಮಣಿಸುವ ನಿಟ್ಟಿನಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಕೂಡಾ ಪ್ರಾರಂಭಗೊಂಡಿದೆ.
ಈ ನಡುವೆ ಲಸಿಕೆ ಬಗ್ಗೆ ಭೀತಿ ಹುಟ್ಟಿಸುವ ಕೆಲಸವೂ ನಡೆಯುತ್ತಿದೆ.ಲಸಿಕೆ ಹಾಕಿಸಿಕೊಂಡರೆ ಹೀಗಾಗುತ್ತದೆ, ಹಾಗಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅವೆಲ್ಲವೂ ಸುಳ್ಳು ಕೊರೋನಾ ಲಸಿಕೆ ಹಾಕಿಸಿಕೊಂಡರೆ ಯಾವುದೇ ಅಪಾಯವಿಲ್ಲ ಎಂದು ಈಗಾಗಲೇ ಬೆಂಗಳೂರಿನಲ್ಲಿ ಅನೇಕ ವೈದ್ಯರು ಹೇಳಿದ್ದಾರೆ.
ಅದರಲ್ಲೂ ನಾರಾಯಣ ಹೃದಾಯಲಯದ ಮುಖ್ಯಸ್ಥ ಡಾ. ದೇವಿ ಪ್ರಸಾದ್ ಶೆಟ್ಟಿ, ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಸುದರ್ಶನ್ ಬಳ್ಳಾಲ್ ಕೊರೋನಾ ಲಸಿಕೆಯನ್ನು ಈಗಾಗಲೇ ಹಾಕಿಸಿಕೊಂಡಿದ್ದು , ನಾವು ಸೇಫ್ ಎಂದು ಸಾರಿದ್ದಾರೆ.
ಈ ನಡುವೆ ಕೊರೋನಾ ಲಸಿಕೆ ವಿಚಾರದಲ್ಲಿ ಜನರನ್ನು ಸುಲಿಗೆ ಮಾಡುವ ತಂಡವೊಂದು ಹುಟ್ಟಿಕೊಂಡಿದೆ. ಲಸಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡುತ್ತಿರುವ ತಂಡವೊಂದು ಬ್ಯಾಂಕ್ ವಿವರಗಳನ್ನು ಸಂಗ್ರಹಿಸಿ ಹಣ ದೋಚುವ ಕೆಲಸ ಮಾಡುತ್ತಿದೆ.
ಒಂದು ವೇಳೆ ಅಪರಿಚಿತರ ಕೊರೋನಾ ಲಸಿಕೆಯ ಫೋನ್ ಕರೆಯ ಬಲೆ ಬಿದ್ರೆ ಬದುಕು ಬರ್ಬಾದ್ ಗ್ಯಾರಂಟಿ.
ಅದು ಹೇಗೆ ಮೋಸ ಮಾಡುತ್ತಾರೆ ಅನ್ನುವ ಕುರಿತ ಹೆಚ್ಚಿನ ವಿವರಗಳು ಈ ಕೆಳಗಿನ ವಿಡಿಯೋದಲ್ಲಿದೆ.
Discussion about this post