ಬೆಂಗಳೂರು : ಹಿಜಾಬ್ ಮತ್ತು ರೇಪ್ ಗೆ ಸಂಬಂಧ ಕಲ್ಪಿಸಿ ನಾನ್ ಸೆನ್ಸ್ ಹೇಳಿಕೆ ನೀಡಿದ್ದ ಶಾಸಕ ಜಮೀರ್ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಕ್ಷಮೆ ಕೇಳಲು ಜಮೀರ್ ಒಪ್ಪಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಜಮೀರ್ ಹೇಳಿಕೆ ವಿರುದ್ಧ ಗರಂ ಆದ್ರು. ಕ್ಷಮೆ ಕೇಳುವಂತೆ ಸೂಚನೆ ನೀಡಿದ್ರು. ಆದರೆ ಚಾಮರಾಜಪೇಟೆ ಶಾಸಕ ಜಗ್ಗಲಿಲ್ಲ. ಕನಕಪುರ ಬಂಡೆಗೆ ಸೆಡ್ಡು ಹೊಡೆದ್ರು, ನಾನ್ಯಾಕೆ ಕ್ಷಮೆ ಕೇಳಲಿ ಎಂದು ತಿರುಗೇಟು ಕೊಟ್ಟರು.
ಜಮೀರ್ ಕ್ಷಮೆ ಕೇಳುವುದಿಲ್ಲ ಅನ್ನುವ ಹೇಳಿಕೆಯಿಂದ ಬೇಸರಗೊಂಡ ಡಿಕೆಶಿ ಕೂಡಾ, ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ್ರು. ಅದ್ಯಾವ ನಾಯಕರಿಗೆ ಅದ್ಯಾವ ಸುದ್ದಿ ಮುಟ್ಟಿಸಬೇಕೋ ಮುಟ್ಟಿಸಿದರು. ಆಗ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದರು. ತನ್ನ ನೆಚ್ಚಿನ ಶಿಷ್ಯನಿಗೆ ಅಪಾಯ ಗ್ಯಾರಂಟಿ ಅನ್ನುವುದು ಗೊತ್ತಾಗುತ್ತಿದ್ದಂತೆ, ಜಮೀರ್ ಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಸೂಚಿಸಿದರು.
ಕೆಪಿಸಿಸಿ ಅಧ್ಯಕ್ಷರ ಮಾತಿಗೂ ಸೊಪ್ಪು ಹಾಕದ ಜಮೀರ್, ಸಿದ್ದರಾಮಯ್ಯ ಕ್ಷಮೆ ಕೇಳುವಂತೆ ಸೂಚಿಸಿದ ತಕ್ಷಣ ಸರಣಿ ಟ್ವೀಟ್ ಮಾಡಿ, ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ ಅಂದರು. ಹಾಗಂತ ಅವರ ಟ್ವೀಟ್ ನಲ್ಲಿ ಎಲ್ಲೂ ನನ್ನ ಹೇಳಿಕೆ ತಪ್ಪಾಗಿದೆ ಅನ್ನಲಿಲ್ಲ. ಬದಲಾಗಿ ತಮ್ಮ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸುತ್ತ, ನೋವಾಗಿದ್ದರೆ ಕ್ಷಮೆ ಇರಲಿ ಅಂದಿದ್ದಾರೆ.
Clothes are definitely not the reason for rape. There are incidents of rape irrespective of what clothes women wear. The actual reason is the rapist mindset of few men. It is the men who should change their mindset.
— B Z Zameer Ahmed Khan (@BZZameerAhmedK) February 14, 2022
ಇದೇ ವೇಳೆ ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಕಾರಣವಲ್ಲ. ಮೈ ತುಂಬಾ ಬಟ್ಟೆ ಹಾಕಿದರೂ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲ ಪುರುಷರ ರೇಪಸ್ಟ್ ಮನಸ್ಥಿತಿ. ಬೆಣ್ಣು ಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು ಅಂದಿದ್ದಾರೆ.
Discussion about this post