ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಿಮಿತ್ತ ಪೊಡವಿಗೊಡೆಯನ ನಾಡಿಗೆ ಬಂದಿರುವ ಅವರು ಇದೇ ಸಂದರ್ಭದಲ್ಲಿ ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನ ಹಾಗೂ ಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದ
ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಂತೆ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮುಖ್ಯಮಂತ್ರಿಗಳಿಗೆ ಕಡೆಗೋಲು, ಪಾಶಧಾರಿ ಬಾಲ ಗೋಪಾಲ, ಮುಖ್ಯಪ್ರಾಣನ ದರ್ಶನ ಮಾಡಿಸಿದರು.
ನಂತರ ಪರ್ಯಾಯ ಶ್ರೀಪಾದರು ಮುಖ್ಯಮಂತ್ರಿಗೆ ರೇಷ್ಮೆ ಶಾಲು, ಮುತ್ತಿನ ಹಾರ, ಸ್ವರ್ಣ ಗೋಪುರದ ಸ್ಮರಣಿಕೆ ಸಹಿತ ಪ್ರಸಾದವನ್ನು ನೀಡಿ ಅಶೀರ್ವದಿಸಿದರು.
ಬಳಿಕ ಸಚಿವೆ ಡಾ. ಜಯಮಾಲಾ ಅವರು ಶ್ರೀಪಾದರ ಆಶೀರ್ವಾದ ಪಡೆಯಲು ಮುಂದಾದಾಗ,’ ಮೇಡಂ ಮಗಳು ಸೆಟ್ಲ್ ಆಗುವಂತೆ ಆಶೀರ್ವಾದ ಮಾಡಿ ಗುರುಗಗಳೇ,’ ಎಂದು ಸಿಎಂ ಹೇಳಿದರು. ಇದಕ್ಕೆ ಶ್ರೀಗಳು ನಗುವಿನಲ್ಲೇ ಉತ್ತರಿಸಿದರೆ, ಇವರು ಬಹಳ ಒಳ್ಳೆಯ ಸಿಎಂ ಸ್ವಾಮಿಗಳೇ ಎಂದು ಡಾ. ಜಯಮಾಲಾ ಪರ್ಯಾಯ ಶ್ರೀಗಳಿಗೆ ಹೇಳಿದರು.
ನಂತರ ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಶ್ರೀಪಾದರಿಂದ ಮಂತ್ರಾಕ್ಷತೆ, ಪ್ರಸಾದ ಸ್ವೀಕರಿಸಲು ಮುಂದಾದಾಗ ಸರಿ ದಾರಿಯಲ್ಲಿ ಹೋಗುವಂತೆ ಚೆನ್ನಾಗಿ ಆಶೀರ್ವಾದ ಮಾಡಿ ಗುರುಗಳೇ ಎಂದು ಸಿಎಂ ಚಟಾಕಿ ಹಾರಿಸಿದರು.
[youtube https://www.youtube.com/watch?v=dnr0vbDvOSU&w=853&h=480]
Discussion about this post