ನನ್ನ ಮೇಲೆ ಗದಾಪ್ರಹಾರ ಮಾಡುತ್ತೀರಾ? ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲಿಗೆ ಹೋಗಿ ಬಂದವರ ಕುಟುಂಬದಲ್ಲಿ ಹುಟ್ಟಿದವನು ನಾನು. ಇದಕ್ಕೆ ನಾನು ಹೆದರುವುದಿಲ್ಲ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ರೌಡಿಶೀಟರ್ ಇಟ್ಟುಕೊಂಡು ಪಬ್ಲಿಕ್ ಟಿವಿ ನಡೆಸುತ್ತಿದ್ದೀರಾ? ನಾನು ನಿಮ್ಮ ವಿರುದ್ಧ ಚಾಲೆಂಜ್ ತಗೊಂಡಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಪಬ್ಲಿಕ್ ಟಿವಿ ವಿರುದ್ಧ ಗುಡುಗಿದ್ದಾರೆ.
ಅರಮನೆ ಮೈದಾನದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಯಾಮೆರಾ ಮುಂದೆ ಕುಳಿತು ಮಾತನಾಡುವುದು ಬೇರೆ, ಸಾರ್ವಜನಿಕವಾಗಿ ಜನರ ಮುಂದೇ ನಿಂತು ಮಾತನಾಡುವುದು ಬೇರೆ. ಒಂದು ಕಾಲದಲ್ಲಿ ನೀವು ನಮ್ಮ ಆತ್ಮೀಯ ಸ್ನೇಹಿತರೇ ಆಗಿದ್ದೀರಿ. ನಿಮ್ಮ ಜೊತೆ ಕುಳಿತು ಊಟ ಮಾಡಿದ್ದೇನೆ. ಆದರೆ ಜೀವನದಲ್ಲಿ ನಿಮಗಿಂತ ಹೆಚ್ಚು ವಿಶ್ವಾಸ ನಾನು ಜನರಲ್ಲಿ ಉಳಿಸಿಕೊಂಡಿದ್ದೇನೆ. ಸಂಪತ್ತನ್ನು ಲೂಟಿ ಮಾಡಿ ಜೀವನ ನಡೆಸಲು ಬಂದಿಲ್ಲ. ನಿನ್ನೆ 20 ನಿಮಿಷ ಮಾತನಾಡಿದ್ದೀರಿ. ಆದರೆ ನಾನು ಹೆದರೊಲ್ಲ, ಜನರ ವಿಶ್ವಾಸದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಇಷ್ಟು ದಿನ ಸುಮ್ಮನಿದ್ದೆ, ಈಗ ಸುಮ್ಮನೆ ಇರುವುದಿಲ್ಲ. ನಾನು ಯುದ್ಧ ಸಾರುತ್ತೇನೆ. ನಾನು ಹೋರಾಟಕ್ಕೆ ಸಿದ್ಧ ಎಂದರು.
ಕುಮಾರಸ್ವಾಮಿ ಆಡೋ ಮಾತುಗಳು, ಮಾಧ್ಯಮಗಳ ಕೈಗೊಳ್ಳುತ್ತಿರುವ ಕ್ರಮಗಳನ್ನು ನೋಡಿದ್ರೆ ಅವರು ಹತಾಶೆಗೊಂಡಿರುವುದು ಸ್ಪಷ್ಟವಾಗುತ್ತಿದೆ.
ಬಲಪಂಥೀಯ ಸಾಮಾಜಿಕ ಜಾಲತಾಣ ಬರಹಗಾರರ ಮೇಲೆ ಪೊಲೀಸ್ ಕೇಸುಗಳು ಬಿದ್ದ ಬೆನ್ನಲ್ಲೇ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ಕೇಸು ಜಡಿಯಲಾಗಿತ್ತು. ಇದೀಗ ಪಬ್ಲಿಕ್ ಟಿವಿ ರಂಗನಾಥ್ ಸರದಿ.
ಕಳೆದ ಹಲವು ತಿಂಗಳುಗಳಿಂದ ಮಾಧ್ಯಮಗಳನ್ನು ಕಂಡರೆ ಕೆಂಡದಂತ ಕೋಪ ಕಾರುತ್ತಿದ್ದ ಸಿಎಂ ಟಿವಿ ವಾಹಿನಿಗಳಿಗೆ ಬೈಟ್ ಕೊಡುವುದನ್ನೇ ನಿಲ್ಲಿಸಿದ್ದಾರೆ. ಅದಕ್ಕೆ ಅವರು ಸ್ವತಂತ್ರರಿದ್ದಾರೆ.
ಆದರೆ ಮಾಧ್ಯಮಗಳ ಮೇಲೆ ಕೇಸು ಹಾಕೋದು, ಬೆದರಿಸೋದು ಉತ್ತಮ ಬೆಳವಣಿಗೆಯಲ್ಲ. ಹಾಗೇ ನೋಡಿದ್ರೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರನ್ನು ಮಾಧ್ಯಮಗಳು ಟೀಕಿಸಿದಷ್ಟು ಕುಮಾರಸ್ವಾಮಿಯವರನ್ನು ಟೀಕಿಸಿಲ್ಲ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರನ್ನು ಕಾಲೆಳೆದ ಮಾಧ್ಯಮಗಳು ಕುಮಾರಸ್ವಾಮಿಯವರ ತಪ್ಪುಗಳನ್ನು ಅಷ್ಟೊಂದು ಎತ್ತಿ ತೋರಿಸಿಲ್ಲ. ಬ್ರದರ್ ಅನ್ನುವ ಪ್ರೀತಿಯನ್ನು ಮಾಧ್ಯಮಗಳು ಇಟ್ಟುಕೊಂಡಿತ್ತು.
ಆದರೆ ಯಡಿಯೂರಪ್ಪ ಆಗ್ಲಿ, ಸಿದ್ದರಾಮಯ್ಯ ಆಗ್ಲಿ ಬಂದ ವರದಿಗೆ ಪ್ರತಿಕ್ರಿಯೆ ಆಲ್ ರೈಟ್ ಮುಂದಕ್ಕೆ ಹೋಗೋಣ ಅನ್ನುತ್ತಿದ್ದರು. ಆದರೆ ಕುಮಾರಸ್ವಾಮಿ ಸಿಡುಕುತ್ತಿರುವ ಪರಿ ನೋಡಿದ್ರೆ ಅಪಾಯ ಗ್ಯಾರಂಟಿ.
ಇನ್ನು ಮಾಧ್ಯಮಗಳು ತಪ್ಪು ಮಾಡಿದ್ರೆ ಜನಪ್ರತಿನಿಧಿಗಳು ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಬಹುದಾಗಿದೆ. ಅದನ್ನು ಬಿಟ್ಟು ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ನೋಡಿದ್ರೆ ಉದ್ದೇಶ ಸ್ಪಷ್ಟವಾಗಿದೆ. ಮಾಧ್ಯಮಗಳ ಬಾಯಿ ಮುಚ್ಚಿಸಲೇಬೇಕು, ಕತ್ತು ಹಿಸುಕಲೇಬೇಕು ಎಂದು ತೀರ್ಮಾನಿಸಿದಂತಿದೆ.
ಇನ್ನೂ ಮಾಧ್ಯಮಗಳ ವರದಿಯಿಂದ ನೋವಾದರೆ ಕೋರ್ಟ್ ನಲ್ಲಿ ಮಾನನಷ್ಟ ಕೇಸು ದಾಖಲಿಸಬಹುದು, ಎಡಿಟರ್ ಗಿಲ್ಡ್, ಪ್ರೆಸ್ ಕೌನ್ಸಿಲ್, ಬ್ರಾಡ್ ಕ್ಯಾಸ್ಟಿಂಗ್ ಮಿನಿಸ್ಟ್ರಿ ಹೀಗೆ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವ ಅನೇಕ ವೇದಿಕೆಗಳಿದೆ. ಆದರೆ ಅವೆಲ್ಲವನ್ನೂ ಬಿಟ್ಟು ಪೊಲೀಸ್ ಇಲಾಖೆಯಲ್ಲೇ ದೂರು ದಾಖಲಾಗುತ್ತಿರುವುದ್ಯಾಕೆ ಅನ್ನುವುದು ಧಮ್ಕಿಯ ನಂತ್ರ ಸ್ಪಷ್ಟವಾಗಿದೆ.
ನಿನ್ನೆಯಷ್ಟೇ ಅನಿತಾ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಸಿಡಿಮಿಡಿಗೊಂಡಿದ್ದರು, ಇದೀಗ ಮತ್ತೆ ಕುಮಾರಸ್ವಾಮಿ ಗುಡುಗಿದ್ದಾರೆ.
ಹಾಗಾದ್ರೆ ಕುಮಾರಸ್ವಾಮಿ ಅದ್ಯಾಕೆ ರಂಗನಾಥ್ ಮೇಲೆ ಗರಂ ಆದ್ರೂ ಗೊತ್ತಿದೆಯಾ, ಕಾರಣವಿದೆ. ಅನಿತಾ ಅವರನ್ನು ನಿನ್ನೆ ಬಿಗ್ ಬುಲೆಟಿನ್ ನಲ್ಲಿ ಜಾಡಿಸಿದ್ದರು.
Discussion about this post