ಬೆಳಗಾವಿ : ಹಲವು ವರ್ಷಗಳ ಬೇಡಿಕೆ ಪಟ್ಟಿಯ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕರ್ನಾಟಕದಲ್ಲಿ ಕಾಲ ಕೂಡಿ ಬಂದಿದೆ. ಇಂದಿನಿಂದ ಪ್ರಾರಂಭವಾಗಲಿರುವ 10 ದಿನಗಳ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಈಗಾಗಲೇ ಈ ಕಾಯ್ದೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಕೂಡಾ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಿದೆ.
ಆದರೆ ಮಸೂದೆಯಲ್ಲಿರುವ ಹಲವು ಅಂಶಗಳು ರಾಜ್ಯ ಸರ್ಕಾರಕ್ಕೆ ವರದಾನವಾಗುವ ಸಾಧ್ಯತೆಗಳಿಗೆ. ಈ ಬಗ್ಗೆ ಕಾನೂನು ಸಚಿವ ಜೆ ಮಾಧುಸ್ವಾಮಿಯವರೇ ಸುಳಿವು ಬಿಟ್ಟುಕೊಟ್ಟಿದ್ದಾರೆ. ತುಮಕೂರಿನಲ್ಲಿ ಮಾತನಾಡಿರುವ ಅವರು ಪರಿಶಿಷ್ಟ ಜಾತಿಯ ವ್ಯಕ್ತಿ ಕ್ರಿಶ್ಚಿಯನ್ ಆಗಿ ಮತಾಂತರವಾದರೆ, ತಿದ್ದುಪಡಿಗೊಳ್ಳಲಿರುವ ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಆತನ ಮೂಲ ಜಾತಿ ಪ್ರಮಾಣ ಪತ್ರವೂ ತಿದ್ದುಪಡಿಗೊಳ್ಳಲಿದೆ. ಹೀಗಾಗಿ ಮತಾಂತರವಾದ ಪರಿಶಿಷ್ಟ ಜಾತಿಯ ವ್ಯಕ್ತಿ ಅಲ್ಪಸಂಖ್ಯಾತನಾಗುತ್ತಾನೆ ಅಂದಿದ್ದಾರೆ. ಆದರೆ ಇದು ಎಸ್ಟಿಗಳಿಗೆ ಅನ್ವಯವಾಗೋದಿಲ್ಲ ಅಂತಾ ಸಚಿವರು ಸ್ಪಷ್ಟ ಪಡಿಸಿದ್ದಾರೆ.
ಈ ನಡುವೆ ಮತಾಂತರ ನಿಷೇಧ ಕಾಯ್ದೆ ಕುರಿತಂತೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಬಡತನ ಹಾಗೂ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡು ಆಸೆ ಅಮಿಸವೊಡ್ಡಿ ಮತಾಂತರ ಮಾಡೋದು ಸರಿಯಲ್ಲ. ಮತಾಂತರ ಸಮಾಜಕ್ಕೆ ಒಳಿತನ್ನೂ ಮಾಡೋದಿಲ್ಲ. ಮತಾಂತರ ನಿಷೇಧ ಕಾಯ್ದೆ ಕುರಿತಂತೆ ನನ್ನ ಭೇಟಿಯಾಗಿರುವ ಕ್ರೈಸ್ತ ಸಮುದಾಯದ ನಿಯೋಗಕ್ಕೆ ಆತಂಕ ಪಡುವ ಅಗತ್ಯವಿಲ್ಲ ಅಂತಾ ಹೇಳಿದ್ದೇನೆ ಅಂದಿದ್ದಾರೆ.
Discussion about this post