ಪೌರತ್ವ ವಿರೋಧಿ ಕಾಯ್ದೆ ಮಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವತ್ತಿನ ಪ್ರತಿಭಟನೆಯಲ್ಲಿ ಸ್ಥಳೀಯರೊಂದಿಗೆ ಅನ್ಯ ಪ್ರದೇಶದಿಂದ ಬಂದ ಸಮಾಜ ದ್ರೋಹಿ ಶಕ್ತಿಗಳು ಸೇರಿಕೊಂಡಂತೆ ಕಾಣಿಸುತ್ತಿದೆ.
ಇಲ್ಲವಾದರೆ ಇವತ್ತು ಗೋಲಿಬಾರ್ ನಡೆಸಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಪ್ರತಿಭಟನೆಗಳಾದ ಸಂದರ್ಭದಲ್ಲಿ ಲಾಠಿ ಜಾರ್ಜ್ ಆಗೋದು ಮಾಮೂಲಿ. ಆದರೆ ಪೊಲೀಸರು ಗನ್ ಎತ್ತಬೇಕಾದ ಪರಿಸ್ಥಿತಿ ಬಂದಿದೆ ಅಂದ್ರೆ ಹೋರಾಟ ಯಾವ ಮಟ್ಟಕ್ಕೆ ಹೋಗಿರಬಹುದು ಎಂದು ಊಹಿಸಬೇಕಾಗುತ್ತದೆ.
ಇನ್ನು ಇವತ್ತು ಮಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಪೌರತ್ವ ಕಾಯ್ದೆ ಬಗ್ಗೆ ಅರಿವು ಇದ್ದಂತೆ ಕಾಣಿಸುತ್ತಿಲ್ಲ. ಒಂದು ವೇಳೆ ಕಾಯ್ದೆಯ ಬಗ್ಗೆ ಅರಿವು ಇರುತ್ತಿದ್ರೆ ಈ ರೀತಿ ಹಿಂಸಾತ್ಮಕವಾಗಿ ಹೋರಾಟ ಮಾಡುತ್ತಿರಲಿಲ್ಲ. ಅಂತಿಮವಾಗಿ ಕಾಯ್ದೆ ಬೇಕಾ ಬೇಡವೇ ಅನ್ನುವುದನ್ನು ನಿರ್ಧರಿಸಬೇಕಾಗಿರುವುದು ಸುಪ್ರೀಂಕೋರ್ಟ್. ವಿಷಯ ನ್ಯಾಯಾಲಯದಲ್ಲಿರುವ ಸಂದರ್ಭದಲ್ಲಿ ಬೀದಿಗಿಳಿದು ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಪ್ರತಿಭಟನೆ ನಡೆದಿದೆ ಅಂದ್ರೆ ಇವರೆಲ್ಲಾ ದಡ್ಡರೇ ಸರಿ.
ಮಂಗಳೂರಿನಲ್ಲಿ ಇವತ್ತು SKSSF ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿತ್ತು. ನಿಷೇಧಾಜ್ಞೆ ಕಾರಣ ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಆದರೂ ವಿಷಯ ತಿಳಿಯದ ( ಅವರು ಉದ್ದೇಶಪೂರ್ವಕವಾಗಿ ಬಂದಿರಲೂ ಸಾಕು) 200 ಮಂದಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಬಳಿ ಜಮಾಯಿಸಿದ್ದರು. ಬಳಿಕ ಇದೇ ಯುವಕ ಗುಂಪು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಯತ್ತ ನುಗ್ಗಲು ಯತ್ನಿಸಿತು. ಇದನ್ನು ತಡೆಯಲು ಪೊಲೀಸರು ಲಾಠಿ ಜಾರ್ಜ್ ನಡೆಸಿದರು.
ಈ ವೇಳೆ ಉದ್ರಿಕ್ತ ಗುಂಪು ಪೊಲೀಸರತ್ತ ಕಲ್ಲು ತೂರಾಟ ಪ್ರಾರಂಭಿಸಿತು. ಇದರಿಂದ ಪೊಲೀಸರಿಗೆ ಗಾಯವಾಯ್ತು. ತಕ್ಷಣ ಪೊಲೀಸರು ಆಶ್ರುವಾಯು ಸಿಡಿಸಿದರ. ಆದರೆ ಪ್ರತಿಭಟನೆ ತಹಬದಿಗೆ ಬರಲಿಲ್ಲ.
ಈ ವೇಳೆ ನೆಲ್ಲಿಕಾಯಿ ರಸ್ತೆಯಲ್ಲಿ ಪ್ರತಿಭಟನೆ ಕಾವು ಹೆಚ್ಚಾಯ್ತು. ಅಲ್ಲಿ ಜನರನ್ನು ಚದುರಿಸುತ್ತಿದ್ದಂತೆ. ರಾವ್ ಅಂಡ್ ರಾವ್ ಸರ್ಕಲ್ ನಲ್ಲಿ ಜನ ಜಮಾಯಿಸಿದರು. ಮತ್ತೆ ಕಲ್ಲು ತೂರಾಟ ಪ್ರಾರಂಭಿಸಿದರು. ಅಲ್ಲಿ ಜನರನ್ನು ಚದುರಿಸುತ್ತಿದ್ದಂತೆ, ಕುದ್ರೋಳಿಯಲ್ಲಿ ಜಮಾವಣೆಗೊಂಡ ಸುಮಾರು 7 ಸಾವಿರಕ್ಕೂ ಅಧಿಕ ಜನರಿದ್ದ ಗುಂಪು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತು. ಠಾಣೆಯಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿತು. ಮನವೊಲಿಸಲು ಬಂದಿದ್ದ ಅದೇ ಸಮುದಾಯದ ಮುಖಂಡರನ್ನೂ ಬಿಡಲಿಲ್ಲ ಈ ಗುಂಪು. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ್ಲೂ ಗುಂಪು ಚದುರಲಿಲ್ಲ. ಹೀಗಾಗಿ ಬಲ ಪ್ರಯೋಗ ಮಾಡಿ ಗುಂಪನ್ನು ಚದುರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಹೇಳಿದ್ದಾರೆ.
ಇವತ್ತಿನ ಘಟನೆಯಲ್ಲಿ ಇಬ್ಬರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರೆ, ಅಥವಾ ಅವರು ದಾರಿ ಹೋಕರಾಗಿದ್ದರೆ ಅನ್ನುವುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಮೃತಪಟ್ಟವರ ಹಿನ್ನಲೆಯೇನು ಅನ್ನುವುದನ್ನು ತಿಳಿಯಬೇಕಾಗಿದೆ. ( ಗೋಲಿಬಾರ್ ಗೆ ಬಲಿಯಾಗಿರುವ ಕುರಿತಂತೆ ಪೊಲೀಸ್ ಇಲಾಖೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷರು ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದಾರೆ)
ಇವತ್ತಿನ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಂದಿಯ ಹಿನ್ನಲೆಯನ್ನು ಪೊಲೀಸರು ತಿಳಿದುಕೊಂಡರೇ ಎಲ್ಲಾ ರಹಸ್ಯಗಳು ಬಯಲಾಗುತ್ತದೆ.
ಇದರೊಂದಿಗೆ ಕರಾವಳಿಯಲ್ಲಿ ತೀವ್ರವಾಗಿರುವ ದನ ಕಳ್ಳರನ್ನು ಮೊದಲು ಹೆಡೆ ಮುರಿ ಕಟ್ಟಬೇಕು. ಜೊತೆಗೆ ಸಕ್ರಿಯವಾಗಿ ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತು ಹಾಕಬೇಕು, ಕರಾವಳಿ ಶಾಂತಿ ನೆಲೆಸುತ್ತದೆ.
Discussion about this post