ಬೀಜಿಂಗ್ : ಅಮೆರಿಕಾದ ಎಚ್ಚರಿಕೆಯ ನಡುವೆಯೂ ವಿಶ್ವಕ್ಕೆ ಕೊರೋನಾ ಸೋಂಕು ಹರಡಿದ ಚೀನಾ ಯುದ್ದಕ್ಕೆ ಸಿದ್ದತೆ ನಡೆಸಿದೆ. ದ್ವೀಪರಾಷ್ಟ್ರ ತೈವಾನ್ ಜೊತೆಗೆ ಹಲವು ತಿಂಗಳುಗಳಿಂದ ತಿಕ್ಕಾಟ ನಡೆಸುತ್ತಿರುವ ಚೀನಾ ಇದೀಗ ಯುದ್ಧದ ಹಾದಿ ಹಿಡಿದಿದೆ.
ಚೀನಾ ದ್ವೀಪರಾಷ್ಟ್ರವನ್ನು ವಶಕ್ಕೆ ಪಡೆಯಲು ಮುಂದಾಗುತ್ತಿದೆ ಅನ್ನುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ಗುಡುಗಿದ್ದ ಅಮೆರಿಕಾ, ತೈವಾನ್ ತಂಟೆಗೆ ಹೋದ್ರೆ ಹುಷಾರ್ ಅಂದಿದೆ. ಆದರೆ ಅದಕ್ಕೆ ಚೀನಾ ಸೊಪ್ಪು ಹಾಕಿದಂತೆ ಕಾಣಿಸುತ್ತಿಲ್ಲ. ಬದಲಾಗಿ ಅಗತ್ಯ ವಸ್ತುಗಳನ್ನು ದಾಸ್ತಾನು ಇಟ್ಟುಕೊಳ್ಳುವಂತೆ ಚೀನಾ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಚೀನಿಯರು ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿ ಬಿದ್ದಿದ್ದಾರೆ.
ತೈವಾನ್ ಮೇಲೆ ಚೀನಾ ಕಣ್ಣು
ಚೀನಾದ ಪಕ್ಕದಲ್ಲಿರುವ ತೈವಾನ್ ಸ್ವತಂತ್ರ ದ್ವೀಪರಾಷ್ಟ್ರ. ಆದರೆ ಚೀನಾ ಮಾತ್ರ ಇದಕ್ಕೆ ಮಾನ್ಯತೆ ನೀಡಿಲ್ಲ. ಇದು ನನ್ನ ಭೂಭಾಗ ಅನ್ನುವುದು ಚೀನಾ ವಾದ. ಹೀಗಾಗಿ ಕಳೆದ ಹಲವು ವರ್ಷಗಳಲ್ಲಿ ತೈವಾನ್ ವಶಪಡಿಸಿಕೊಳ್ಳಲು ಚೀನಾ ಸಂಚು ರೂಪಿಸುತ್ತಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಚೀನಾ ಸೇನೆ ಯುದ್ದ ನೌಕೆ, ಯುದ್ದ ವಿಮಾನ ಗಳನ್ನು ತೈವಾನ್ ನ ಜಲ ಹಾಗೂ ವಾಯುಸೀಮೆಯನ್ನು ಉಲ್ಲಂಘಿಸಿದೆ.
Discussion about this post