ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರು ಅಧಿಕಾರ ಧ್ವಜ ನೆಡುತ್ತಿದ್ದಂತೆ ಪಾಕಿಸ್ತಾನ ಮತ್ತು ಚೀನಾ ಚಿಗುರಿ ನಿಂತಿದೆ. ಈ ಬಗ್ಗೆ ಚೀನಾದಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದ್ದು, ಅಫ್ಘಾನಿಸ್ತಾನದೊಂದಿಗೆ ಹೊಂದಿರುವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಚೀನಾ ಬಯಸುತ್ತದೆ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸದಿದ್ರೆ ದೇಶದ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವುದಾಗಿ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಹೇಳಿದ್ದಾರೆ.
ತಾಲಿಬಾನಿಗಳೇ ಉಗ್ರರು ಎಂದು ಈಗಾಗಲೇ ಸಾಬೀತಾಗಿದೆ. ಅದು ಕಂದಹಾರ್ ಘಟನೆ ಇರಬಹುದು, ಅಮೆರಿಕಾದ ಟ್ವಿನ್ ಟವರ್ ದಾಳಿ ಇರಬಹುದು. ಹಾಗಿದ್ದ ಮೇಲೂ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸದಿದ್ರೆ ಅನ್ನುತ್ತಿದೆ ಚೀನಾ.
ಇನ್ನು ತಾಲಿಬಾನಿ ಉಗ್ರರ ಅಪ್ಪನೆಂದೇ ಕರೆಸಿಕೊಂಡಿರುವ ಪಾಕಿಸ್ತಾನದಲ್ಲೂ ತಾಲಿಬಾನಿಗಳ ರಣ ಕೇಕೆ ಸಂತೋಷಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಇನ್ನೊಬ್ಬರ ಸಂಸ್ಕೃತಿಯನ್ನು ನಿಮ್ಮದಾಗಿಸಿಕೊಂಡು ಮಾನಸಿಕವಾಗಿ ಅವರ ಅಧೀನದಲ್ಲಿದ್ರಿ, ಈಗ ಇಂಧ ಬಂಧನದ ಸಂಕೋಲೆಯನ್ನು ಕಿತ್ತು ಹಾಕಲಾಗಿದೆ ಅಂದಿದ್ದಾರೆ.
Discussion about this post