ವಿಶ್ವದ ಶ್ರೀಮಂತ ರಾಷ್ಟ್ರ ಎಂದು ಬೀಗುತ್ತಿದ್ದ ಅಮೆರಿಕಾಗೆ ಇದೀಗ ಚೀನಾ ಬಲವಾದ ಪೆಟ್ಟುಕೊಟ್ಟಿದೆ. ಕೊರೋನಾ ಕರಾಳ ಸೋಂಕಿನ ನಡುವೆಯೂ ಅಮೆರಿಕವನ್ನು ಹಿಂದಿಕ್ಕಿರುವ ಚೀನಾ ವಿಶ್ವದ ಶ್ರೀಮಂತ ರಾಷ್ಟ್ರ ಅನ್ನಿಸಿಕೊಂಡಿದೆ. 2021ರಲ್ಲಿ ಚೀನಾ ವಿಶ್ವದ ಶ್ರೀಮಂತ ರಾಷ್ಟ್ರವಾಗಿದೆ.
McKinsey & Co ಸಂಸ್ಥೆಯ ಸಂಶೋಧನಾ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದ್ದು, ಕಳೆದ ಎರಡು ದಶಕಗಳಲ್ಲಿ ಚೀನಾದ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಸಂಶೋಧನೆಯ ಪ್ರಕಾರ ಚೀನಾ ವಿಶ್ವ ವಾಣಿಜ್ಯ ಸಂಸ್ಥೆಗೆ 2000 ರ ಇಸವಿಯಲ್ಲಿ ಸೇರಿಕೊಳ್ಳುವಾಗ 7 ಟ್ರಿಲಿಯನ್ ಡಾಲರ್ ಇದ್ದ ಚೀನಾದ ಆದಾಯ, 20 ವರ್ಷಗಳಲ್ಲಿ ಬರೋಬ್ಬರಿ 120 ಟ್ರಿಲಿಯನ್ ಡಾಲರ್ ಗೆ ಏರಿದೆ, McKinsey & Co ಸಂಸ್ಥೆಯನ್ನು ಉಲ್ಲೇಖಿಸಿ Bloomberg ಈ ಬಗ್ಗೆ ವರದಿ ಮಾಡಿದ್ದು ಅಮೆರಿಕಾದ ಸಂಪತ್ತಿನ ನಿವ್ವಳ ಮೌಲ್ಯ 90 ಟ್ರಿಲಿಯನ್ ಡಾಲರ್ ಗೆ ತಲುಪಿದೆ.
Discussion about this post