ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ವಿಪರೀತ ಅನ್ನಿಸುವಷ್ಟು ಮಟ್ಟಿಗೆ ಟೀಕಿಸಿದವರು ಯಾರಾದ್ರು ಇದ್ರೆ ಅದು ಸಿದ್ದರಾಮಯ್ಯ ಮಾತ್ರ. ಸಿದ್ದರಾಮಯ್ಯ ತನ್ನದೇ ಶೈಲಿಯಲ್ಲಿ ಅವರದ್ದು ಮನ್ ಕಿ ಬಾತ್, ನಮ್ದು ಕಾಮ್ ಕಿ ಬಾತ್ ಎಂದು ಹೋದ ಕಡೆ ಬಂದ ಕಡೆ ಹೇಳುತ್ತಿದ್ದರು.
ಆದರೆ ಇದೀಗ ಇದೇ ಮನ್ ಕಿ ಬಾತ್ ಕಾರ್ಯಕ್ರಮದಿಂದ ಛತೀಸ್
ಗಢದ ಕಾಂಗ್ರೆಸ್ ಸಿಎಂ ಭೂಪೇಶ್ ಬಘೇಲ್ ಮನಸೋತಿದ್ದಾರೆ.
ಹೀಗಾಗಿ ಕಳೆದ ತಿಂಗಳಿನಿಂದ ಬಘೇಲ್ ರೇಡಿಯೋ ಕಾರ್ಯಕ್ರಮವನ್ನು ಲೋಕವಾಣಿ ಹೆಸರಿನಲ್ಲಿ ಪ್ರಾರಂಭಿಸಿದ್ದು, ಈಗಾಗಲೇ ಎರಡು ಕಂತು ಪ್ರಸಾರವಾಗಿದೆ.
ಛತೀಸ್ ಗಢದ ಆಕಾಶವಾಣಿ ಕೇಂದ್ರ, ಎಫ್ ಎಂ ರೇಡಿಯೋ ಮತ್ತು
ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಆಗಸ್ಟ್ 11 ರಂದು ಮೊದಲ ಕಾರ್ಯಕ್ರಮ ಪ್ರಸಾರವಾದರೆ, ಸೆಪ್ಟಂಬರ್
8 ರಂದು 2ನೇ ಕಂತು ಪ್ರಸಾರವಾಗಿತ್ತು.
ಪ್ರತೀ ತಿಂಗಲ ಎರಡನೇ ಭಾನುವಾರ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿಪಡಿಸಲಾಗಿದ್ದು, ಬೆಳಗ್ಗೆ 10.30ರಿಂದ 10.55ರ ತನಕ ಕಾರ್ಯಕ್ರಮ ಪ್ರಸಾರವಾಗಲಿದೆ.
Discussion about this post