ಕರ್ನಾಟಕದ ಸಂಸದರ ಕಾರ್ಯವೈಖರಿ ಕುರಿತಂತೆ ಟೀಕೆ ಮಾಡಿದ್ದ ಚಿಂತಕ ಚಕ್ರವರ್ತಿ ಸೂಲಿಬೆಲೆ ಈ ಸಂಬಂಧ ಟ್ವೀಟ್ ಒಂದನ್ನು ಮಾಡಿದ್ದರು. ಜೊತೆಗೆ ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ಲೇಖನವನ್ನೂ ಕೂಡಾ ಬರೆದಿದ್ದರು.
ಈ ಲೇಖನಕ್ಕೆ ಬಿಜೆಪಿಯ ಕಾರ್ಯಕರ್ತರೇ ಭೇಷ್ ಅಂದಿದ್ದರು. ಅವರ ಟ್ವೀಟ್ ಗೆ ಬಂದ ರೀ ಟ್ವೀಟ್ ಗಳೆಲ್ಲವೂ ಸಂಸದರನ್ನು ಟೀಕಿಸಿಯೇ ಇತ್ತು. ಮೋದಿ ಅನ್ನುವ ಹೆಸರಿಲ್ಲವಾಗಿದ್ದರೆ ಇವರು ಯಾರೊಬ್ಬರು ಗೆಲ್ಲುತ್ತಿರಲಿಲ್ಲ. ನಾವೆಲ್ಲ ಇವರಿಗೆ ಓಟು ಮಾಡಿದ್ದು ಮೋದಿ ಅವರ ಮುಖ ನೋಡಿಯೇ ಎಂದು ಸಾರಿದ್ದರು.
ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧ ತಿರುಗಿ ಬಿದ್ದರಂತೆ…ಚಕ್ರವರ್ತಿ ಸೂಲಿಬೆಲೆ
ಆದರೆ ಆದರೆ ಬಿಟಿವಿ ಅನ್ನುವ ವಾಹಿನಿಗೆ ಅದೇನಾಯ್ತೋ ಗೊತ್ತಿಲ್ಲ. ಸೂಲಿಬೆಲೆ ಅದೇನು ಕೋಪವಿತ್ತೋ ಗೊತ್ತಿಲ್ಲ. ಸೂಲಿಬೆಲೆ ಮಾಡಿದ ಟ್ವೀಟ್ ಗೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬ್ರೇಕಿಂಗ್ ಸ್ವರೂಪದಲ್ಲಿ ಸುದ್ದಿ ಪ್ರಕಟಿಸಿತು. ಆದರೆ ಆ ಸುದ್ದಿಯಲ್ಲಿ ಸೂಲಿಬೆಲೆ ಅವರ ಟ್ವೀಟ್ ತೋರಿಸಲಾಯ್ತೇ ಹೊರತು, ವಿರೋಧಿಸಿ ಬಂದಿದೆ ಎನ್ನಲಾದ ಒಂದೇ ಒಂದು ಟ್ವೀಟ್ ತೋರಿಸಿಲ್ಲ. ಸುದ್ದಿಗೆ ಸಾಕ್ಷಿ ಇಲ್ಲ ಅಂದ ಮೇಲೆ ಅದು ಸುಳ್ಳು ಸುದ್ದಿ ಎಂದಾಯ್ತು.
ಇನ್ನು ಈ ಸುದ್ದಿಯ ವಿಡಿಯೋವನ್ನು ಫೇಸ್ ಬುಕ್ ಮತ್ತು ಯೂ ಟ್ಯೂಬ್ ನಲ್ಲೂ ಆಪ್ ಲೋಡ್ ಮಾಡಲಾಗಿದ್ದು, ಸೂಲಿಬೆಲೆಯನ್ನು ವಿರೋಧಿಸಿ ಯಾರೊಬ್ಬರೂ ಕಮೆಂಟ್ ಮಾಡಿಲ್ಲ. ಬಹುತೇಕ ಮಂದಿ ಬಿಟಿವಿಗೆ ಕ್ಯಾಕರಿಸಿದ್ದು, ಸೂಲಿಬೆಲೆ ಹೇಳಿದ್ದು ಸರಿ ಇದೆ ಅಂದಿದ್ದಾರೆ.
ಅಲ್ಲಿಗೆ ಓದುಗರಾದ ನೀವು ಯಾವುದು ಸತ್ಯ ಸುಳ್ಳು ಅನ್ನುವುದನ್ನು ಅರಿತುಕೊಳ್ಳಬಹುದು.ಸೂಲಿಬೆಲೆ ಮಾತಿನಿಂದ ನಿಜವಾಗಿಯೂ ಉರಿದುಕೊಂಡವರು ರಾಜ್ಯದ ಸಂಸದರೇ ಹೊರತು, ಮತ ಹಾಕಿದ ಮತದಾರರಲ್ಲ ಅನ್ನುವುದು ಸ್ಪಷ್ಟ.
ಸೂಲಿಬೆಲೆ ಹೀಗ್ಯಾಕೆ ಅಂದ್ರು ಅನ್ನುವುದನ್ನು ಮುಂದೆ ಹೇಳ್ತಿವಿ.
Discussion about this post