ನಾವು ಹೇಳಿದಂತೆ ಕಾರ್ಯಕರ್ತರು ಇರ್ತಾರೆ. ಚುನಾವಣೆ ಬಂದ್ರೆ ಸಾಕು ಕಾರ್ಯಕರ್ತರು ನಮ್ಮ ಬೆನ್ನ ಹಿಂದೆ ಓಡಿ ಬರ್ತಾರೆ ಅನ್ನುವ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದರು.Chakravarthy sulibele
ಬೆಂಗಳೂರು : ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈಗಿನ ಬಿಜೆಪಿ ಸರ್ಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಸರ್ಕಾರದಲ್ಲೂ ಹಿಂದೂ ಕಾರ್ಯಕರ್ತರು ಭಯದಿಂದಲೇ ಬದುಕಬೇಕಿದೆ ಅನ್ನುವುದು ಹಿಂದೂ ಹೋರಾಟಗಾರರ ಆಕ್ರೋಶದ ನುಡಿ.
ಇಷ್ಟು ದಿನಗಳ ಕಾಲ ಕಾಂಗ್ರೆಸ್ ವಿರುದ್ಧ ಕುದಿಯುತ್ತಿದ್ದ ಹಿಂದೂ ಕಾರ್ಯಕರ್ತರು ತಮ್ಮದೇ ಬಿಜೆಪಿಯ ವಿರುದ್ಧ ಕೆಂಡವಾಗಿದ್ದಾರೆ. ಬಿಜೆಪಿ ನಾಯಕರು ತಮ್ಮ ಭಾಷಣಗಳಿಂದಲೇ ನಮ್ಮನ್ನು ಮೋಸ ಮಾಡುತ್ತಿದ್ದಾರೆ ಅನ್ನುವುದು ಹಿಂದೂ ಕಾರ್ಯಕರ್ತರಿಗೆ ಅರ್ಥವಾಗಿದೆ.
ಇದನ್ನೂ ಓದಿ : Bhavana Ramanna : ಬಿಜೆಪಿಗೆ ಹೋಗಿದ್ರಿ..ಮತ್ಯಾಕೆ ಇಲ್ಲಿ ಬಂದ್ರಿ : ಪ್ರತಿಭಟನೆಯಲ್ಲಿ ನಟಿ ಭಾವನಾಗೆ ತರಾಟೆ
ಈ ನಡುವೆ ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತರನ್ನು ಹೇಗೆಲ್ಲಾ ಮೋಸ ಮಾಡಿದ್ರು, ಹಿಂದೂ ಕಾರ್ಯಕರ್ತರ ಸಾವಿನ ಹೆಸರಿನಲ್ಲಿ ಬಿಜೆಪಿ ನಾಯಕರು ಹೇಗೆಲ್ಲಾ ಗೆದ್ರು ಅನ್ನುವುದನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಬಿಡಿಸಿಟ್ಟಿದ್ದಾರೆ. ಕಾರ್ಯಕರ್ತನ ಬೆವರಿನ ಆಧಾರದಲ್ಲಿ ವಿಧಾನಸೌಧದಲ್ಲಿ ಅಧಿಕಾರ ನಡೆಸುತ್ತಿರುವವರ ಅಸಲಿ ಮುಖವನ್ನು ಸೂಲಿಬೆಲೆ ಬೆತ್ತಲು ಮಾಡಿದ್ದಾರೆ.
ಕರ್ನಾಟಕದಲ್ಲಿ ರಕ್ತದೋಕುಳಿ ಎಂದು ಪತ್ರ ಬರೆದ ಶೋಭಾ ಕರಂದ್ಲಾಜೆ, ಕಾರ್ಯಕರ್ತರನ್ನು ಉದ್ವಿಗ್ನಗೊಳಿಸಿದ ಕಾರ್ಕಳ ಸುನಿಲ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಎಲ್ಲಿ ಹೋದರು ಎಂದು ಸೂಲಿಬೆಲೆ ಪ್ರಶ್ನಿಸಿದ್ದಾರೆ. ಸೂಲಿಬೆಲೆಯವರ ಮಾತುಗಳನ್ನು ಕಾರ್ಯಕರ್ತರು ಅರ್ಥ ಮಾಡಿಕೊಂಡರೆ ಬಿಜೆಪಿ ಮುಂದಿನ ಬಾರಿ ಸಿಂಗಲ್ ಡಿಜಿಟ್ ಗೆ ಕುಸಿಯೋದು ಗ್ಯಾರಂಟಿ.
Discussion about this post