ಬೆಂಗಳೂರು : ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಕಾಮಲೀಲೆ ಸಿಡಿಯ ಸಂತ್ರಸ್ಥ ಯುವತಿ ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಮ್ಮ ವಕೀಲರನ್ನು ಭೇಟಿಯಾಗಲು ದೌಡಾಯಿಸಿದ್ದಾರೆ. ಸಂತ್ರಸ್ಥ ಯುವತಿ ಕೊಡಲಿರುವ ದೂರಿನ ಆಧಾರದಲ್ಲಿ ಜಾರಕಿಹೊಳಿ ಭವಿಷ್ಯ ನಿರ್ಧಾರವಾಗಲಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಟೆನ್ಸನ್ ಮಾಡಿಕೊಂಡಿಲ್ಲ, ನೀವು ಚಿಂತೆ ಮಾಡಬೇಡಿ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ಇದೊಂದು ಮಹಾಷಡ್ಯಂತ್ರವಾಗಿದ್ದು, ಬೆತ್ತಲೆ ಫೋಟೋ ತೋರಿಸಿದವಳು ನನ್ನ ವಿರುದ್ಧ ಹೇಳಿಕೆ ಕೊಡದೆ ಇರುತ್ತಾಳೆಯೇ. ನಾನು ಕೂಡಾ ಮಾನಸಿಕವಾಗಿ ಸಿದ್ದನಾಗಿದ್ದಾನೆ. ವಕೀಲರು ಎಲ್ಲದಕ್ಕೂ ಉತ್ತರಿಸುತ್ತಾರೆ ಅಂದಿದ್ದಾರೆ.
Discussion about this post