ಚಂದನವನದ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಡ್ರಗ್ಸ್ ಕೇಸ್ ನಲ್ಲಿ ಬಂಧನವಾಗಿರುವ ಆರೋಪಿಗಳಿಂದ ಸೆಕ್ಸ್ ದಂಧೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗೆ ಒಳಪಟ್ಟ ಎಲ್ಲರ ಮೊಬೈಲ್ ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು. ಆ ಮೊಬೈಲ್ ಗಳಲ್ಲಿನ ಡೇಟಾ ರಿಟ್ರೀವ್ ಮಾಡಿದಾಗ ‘ಸೆಕ್ಸ್ ದಂಧೆ’ ಬೆಳಕಿಗೆ ಬಂದಿದೆ.
ಡ್ರಗ್ಸ್ ಕೇಸ್ ನಲ್ಲಿ ಬಂಧನವಾಗಿರುವ ಆರೋಪಿಗಳು ಸೆಕ್ಸ್ ದಂಧೆಗಾಗಿಯೇ ಪ್ರತ್ಯೇಕ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡಿದ್ದರಂತೆ. ಡ್ರಗ್ಸ್ ದಂಧೆ ಬಯಲಾಗುತ್ತಿದ್ದಂತೆಯೇ, ಆ ವಾಟ್ಸ್ ಆಪ್ ಗ್ರೂಪ್ ಅನ್ನು ಡಿಲೀಟ್ ಮಾಡಲಾಗಿತ್ತು ಎನ್ನಲಾಗಿದೆ.
ವಿಚಾರಣೆಗೆ ಒಳಪಟಿದ್ದ ವೇಳೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಮೊಬೈಲ್ ಫೋನ್ ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದರು. ಇಬ್ಬರ ಮೊಬೈಲ್ ಫೋನ್ ನಲ್ಲಿನ ಡೇಟಾ ರಿಟ್ರೀವ್ ಮಾಡಿದ್ಮೇಲೆ, ಸೆಕ್ಸ್ ದಂಧೆ ಕುರಿತಾಗಿ ಸ್ಫೋಟಕ ಸಾಕ್ಷ್ಯ ಲಭ್ಯವಾಗಿದೆ ಎಂದು ನ್ಯೂಸ್ ಚಾನೆಲ್ ವರದಿ ಮಾಡಿದೆ.
Discussion about this post