ತನಿಷಾ ಕುಪ್ಪಂಡ (Tanisha Kuppanda) ಬಳಸಿದ ಪದ ಇದೀಗ ಭೋವಿ ಜನಾಂಗದ ಕೆಂಗಣ್ಣಿಗೆ ಗುರಿ
ಬಿಗ್ ಬಾಸ್ (Bigg boss) ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಅವರನ್ನು ಹುಲಿ ಉಗುರು ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಆದಾದ ನಂತ್ರ ಅರಣ್ಯ ಇಲಾಖೆಯ ನಡೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇಡೀ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವರ್ತೂರು ಅವರಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುವಂತೆ ಮಾಡಿದ್ದು ಸುಳ್ಳಲ್ಲಯ ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಸ್ಪರ್ಧಿ ತನಿಷಾ ಕುಪ್ಪಂಡ ಅವರಿಗೆ (Tanisha Kuppanda) ಸಂಕಷ್ಟ ಎದುರಾಗಿದೆ. ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ SCST ಕಾಯ್ದೆಯಡಿ ಅಟ್ರಾಸಿಟಿ ಕೇಸ್ ತನಿಷಾ ವಿರುದ್ಧ ದಾಖಲಾಗಿದ್ದು, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ FIR ಕೂಡಾ ತೆರೆಯಲಾಗಿದೆ.
ತನಿಷಾ ಅವರು ಬಿಗ್ ಬಾಸ್ ಮನೆಯಲ್ಲಿ ಅವಹೇಳನಕಾರಿ ಪದವೊಂದನ್ನು ಬಳಕೆ ಮಾಡಿದ್ದಾರೆ ಅನ್ನುವುದು ದೂರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ತನಿಷಾ ಕುಪ್ಪಂಡ ಅವರಿಂದ ಅವಹೇಳನಕಾರಿ ಪದ ಬಳಕೆಯಾಗಿದೆ. ಇದರಿಂದ ಬೋವಿ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನು ಓದಿ : ಪತ್ನಿಗೆ ವಿಚ್ಛೇದನ ನೀಡಿದ ರೇಮಂಡ್ ಗ್ರೂಪ್ನ Gautam Singhnia
ಟಾಸ್ಕ್ ವಿಚಾರಕ್ಕೆ ಪ್ರತಾಪ್ ಮತ್ತು ತನಿಷಾ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ವೇಳೆ ತನಿಷಾ ವ_ನ ರೀತಿ ಆಡಬೇಡ ಅಂದಿದ್ದಾರಂತೆ. ಈ ಶಬ್ಧ ಒಂದು ಜಾತಿಯನ್ನು ಪ್ರತಿನಿಧಿಸೋ ಪದ. ಹೀಗಾಗಿಯೇ ಇದೀಗ ಭೋವಿ ಜನಾಂಗದ ನಾಯಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಹಾಗಾದ್ರೆ ಈ ಪ್ರಕರಣ ಏನಾಗಬಹುದು, ತಕ್ಷಣಕ್ಕೆ ಪೊಲೀಸರು ಮಧ್ಯ ಪ್ರವೇಶ ಮಾಡುವ ಲಕ್ಷಣಗಳಿಲ್ಲ. ದೂರಿನ ಆಧಾರದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಫೂಟೇಜ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕಾಗುತ್ತದೆ. ಈ ಫೂಟೇಜ್ ಪಡೆಯಲು ಕಲರ್ಸ್ ವಾಹಿನಿಗೆ ಪೊಲೀಸರು ನೋಟೀಸ್ ನೀಡಬೇಕು. ಈ ವೇಳೆ ವಾಹಿನಿ ಯಾವ ನಿರ್ಧಾರ ಕೈಗೊಳ್ಳುತ್ತದೋ ಗೊತ್ತಿಲ್ಲ.
ಇದನ್ನು ಓದಿ : Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ
ಅಥವಾ ಈ ರಗಳೆ ಯಾಕೆ ಬೇಕು ಅಂತಾ ತನಿಷಾ ಅವರನ್ನು confession room ಗೆ ಕರೆಸಿ, ಪರಿಸ್ಥಿತಿ ವಿವರಿಸಿ ಕ್ಷಮೆ ಕೇಳಿಸುವ ಸಾಧ್ಯತೆಗಳಿದೆ. ಇವೆಲ್ಲವನ್ನೂ ಮೀರಿ ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ ಕ್ರಮ ಕೈಗೊಳ್ಳುವ ಅವಕಾಶವೂ ಪೊಲೀಸರ ಮುಂದಿದೆ. ಆದರೆ ಅಟ್ರಾಸಿಟಿ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಸಾಕಷ್ಟು ತೀರ್ಪುಗಳನ್ನು ನೀಡಿದೆ. ಜೊತೆಗೆ ಅನೇಕ ಸಲಹೆಗಳನ್ನು ಕೂಡಾ ನ್ಯಾಯಾಲಯಗಳು ನೀಡಿದೆ. ಹೀಗಾಗಿ ಪೊಲೀಸರು ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡೋದರಲ್ಲಿ ಅನುಮಾನವಿಲ್ಲ.
Bigg Boss Kannada 10: FIR filed against contestant Tanisha Kuppanda under SC/ST atrocities act for allege
Discussion about this post