ನಗರದ ಬಂಟರ ಹೋಟೆಲ್ ಮಾಲೀಕರ ಸಂಘದ ಆಶ್ರಯದಲ್ಲಿ ಬಂಟರಾತಿಥ್ಯ ಸಮ್ಮಿಲನ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಝೋಮಾಟೋ ಮತ್ತು ಸ್ವಿಗಿಯಿಂದ ಹೋಟೆಲ್ ಮಾಲಿಕರಿಗೆ ತಾತ್ಕಾಲಿಕವಾಗಿ ಲಾಭ ಸಿಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಇದರಿಂದ ಸಮಸ್ಯೆ ಎದುರಾಗಬಹುದು. ಇದನ್ನು ಎದುರಿಸಲು ಸಂಘಟಿತ ಹೋರಾಟ ಅಗತ್ಯವಿದೆ.
ಝೋಮಾಟೋ, ಸ್ವಿಗಿ ಸದ್ಯದಲ್ಲಿ ಹೋಟೆಲ್ ಗಳಿಂದ ಗ್ರಾಹಕರಿಗೆ ತಲುಪಿಸುವಂತಹ ಕೆಲಸ ಮಾಡುತ್ತಿವೆ. ಆದರೆ, ಈ ಸಂಸ್ಥೆಗಳೇ ಹೋಟೆಲ್ ಸ್ಥಾಪಿಸಲು ಮುಂದಾಗಿವೆ. ಈ ಸಮಸ್ಯೆಯನ್ನು ಹೇಗೆ ಎದುರಿಸಲಿದ್ದೇವೆ ಎಂಬುದನ್ನು ಹೋಟೆಲ್ ಮಾಲಕರು ಗಂಭೀರವಾಗಿ ಚಿಂತನೆ ನಡೆಸಬೇಕೆಂದು ಅವರು ಹೇಳಿದರು.
ಇದೆ ವೇಳೆ ಮಾತನಾಡಿದ, ಶಾಸಕ ಎಂ.ಕೃಷ್ಣಪ್ಪ, ನಾನು ಆಕಾಲಕ್ಕೆ ಉಡುಪಿ ಉಪಾಹಾರದಲ್ಲಿ ಬೆಳಿಗ್ಗೆ ಇಡ್ಲೆ ದೋಸೆ ತಿನ್ನುತ್ತಿದ್ದೆ. ಬಂಟರು ತಮ್ಮ ಶಕ್ತಿ, ಸಾಮರ್ಥ್ಯದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಹೋಟೆಲ್ ಪ್ರಾರಂಭಿಸಿದವರು. ಜೊತೆಗೆ ಅಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಬೆಳೆದವರು. ಅಲ್ಲದೆ ರಾಜಕಾರಣದಲ್ಲಿ ಇದ್ದಾರೆ. ಬಂಟ ಸಮುದಾಯದ ಜೊತೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಕೆ.ಏ.ಎಸ್ ಅಧಿಕಾರಿ ಅಜಿತ್ ಕುಮಾರ್ ಹೆಗ್ಡೆ , ಬಂಟರ ಸಮಯದ ಒಂದಾಗುವ ಕಾರ್ಯಕ್ರಮವಿದು. ಕುಟುಂಬದ ಸದಸ್ಯರು ಪರಿಚಯವಾಗುತ್ತೆ. ಮನೆಗೆ ಬಂದವರನ್ನ ಸುಮ್ಮನೆ ಕಳಿಸು ಪದ್ದತಿ ಬಂಟರದಲ್ಲ. ಬಂದ ಅತಿಥಿಗಳಿ ಆತಿಥ್ಯ ನೀಡಿ, ಗೌರವಿಸುವ ಪದ್ದತಿ ಬಂಟರದ್ದ ಎಂದರು.
ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ, ಗೌರವಾಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬೆಂಗಳೂರು ಬಂಟರ ಹೊಟೇಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಸಂಚಾಲಕರಾದ ಜಿ.ಕೆ.ಶೆಟ್ಟಿ, ಸಂಚಾಲಕರಾದ ಕೊರ್ಗಿ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Discussion about this post